Haridasa Sahitya — Vyasadasa
Kruta krutyanadenindina
ಕೃತಕೃತ್ಯನಾದೆನಿಂದಿನ ದಿನದಲಿ
Composer: Jagannatha Dasaru · Deity: Vishnu · Genre: Dasara Pada
Kannada lyrics
ಕೃತಕೃತ್ಯನಾದೆನಿಂದಿನ ದಿನದಲಿ ವ್ರತಿ ಕುಲೋತ್ತಂಸ ಭುವನೇಂದ್ರರಾಯರ ಕಂಡು ||pa|| ಗಂಗಾ ಪ್ರಯಾಗ ಗಯಾ ನೈಮಿಷಾರಣ್ಯ ಕುರು ಜಾಂಗಳಾದ್ಯಖಿಳ ಸುಕ್ಷೇತ್ರಗಳಲಿ ಸಾಂಗ ಕರ್ಮಗಳ ಹರಿಗರ್ಪಿಸಿದ ಫಲವು ಮುನಿ ಪುಂಗವರ ಕಂಡ ಮಾತ್ರದಿ ಸಮನಿಸಿತೆನಗೆ ||1|| ಹಿಂದೆ ಬಹು ಜನ್ಮದಿ ಮಾಡಿದ ಸುಕೃತಕೆ ಕ ರ್ಮಂದೀಶ್ವರನ ದಿವ್ಯ ಪಾದ ಕಮಲ ಸಂದರ್ಶನವೆ ಮಹತ್ಪಲವಾಯಿತೆನಗೆ ಗೋ ವಿಂದನ ಪ್ರತಿಬಿಂಬರಾದ ಕಾರಣದಿಂದ ||2|| ಅನ್ಯಸಾಧನೆಗಳಿನ್ನಾಚರಿಸಲ್ಯಾಕೆ ಮ ತ್ತನ್ಯರಾರಾಧನೆಯ ಮಾಡಲ್ಯಾಕೆ ಸನ್ನುತ ಮಹಿಮ ಜಗನ್ನಾಥ ವಿಠಲನ ಕಾ ರುಣ್ಯ ಪಾತ್ರರಾ ಕರುಣವಾಯಿತೆನ್ನೊಳಿಂದು ||3|| ನಮಿಸುವೆನು ಭುವನೇಂದ್ರ ಗುರುರಾಯರ ಅಮಿತ ಮಹಿಮಗೆ ಅಹೋರಾತ್ರಿಯಲಿ ಬಿಡ…
Transliteration
Kruta krutyanadenindina dinadali Vratikulottamsa buvanendrarayara kandu ||pa|| Ganga prayaga gaya naimisharanya kuru| Jangaladyakila sukshetragalali|| Sanga karmagalu harigarpisida Palavu muni | Pungavara kanda matradi samavenisitu enage ||1|| Hinde bahu janumadali madida sukrutake ka- Rmandisvarana divya pada kamala| Sandarusanave mahatpalavayitenage go| Vindana prati bimbarada karanadinda ||2||…