Haridasa Sahitya — Vyasadasa
Krushnamurti kanna munde
ಕೃಷ್ಣಮೂರ್ತಿ ಕಣ್ಣ ಮುಂದೆ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ|| ಕಷ್ಟಗಳೆಲ್ಲಾ ಪರಿಹರಿಸಿ ಮನ- ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ|| ಮಸ್ತಕದಲಿ ಮಾಣಿಕ್ಯದ ಕಿರೀಟ ಕಸ್ತೂರಿ ತಿಲಕದಿಂದೆಸೆವ ಲಲಾಟ ಶಿಸ್ತಿಲಿ ಕೊಳಲನೂದುವ ಓರೆ ನೋಟ ಕೌಸ್ತುಭ ಎಡಬಲದಲಿ ಓಲಾಟ || ೧|| ಮಘಮಘಿಸುವ ಸೊಬಗಿನ ಸುಳಿಗುರುಳು ಚಿಗುರು ತುಳಸಿ ವನಮಾಲೆಯ ಕೊರಳು ಬಗೆ ಬಗೆ ಹೊನ್ನುಂಗುರವಿಟ್ಟ ಬೆರಳು ಸೊಬಗಿನ ನಾಭಿಯ ತಾವರೆ ಯರಳು ||೨|| ಉಡುದಾರ ವಡ್ಡ್ಯಾಣ ನಿಖಿಲಾಭರಣ ಉಡುಗೆ ಪೀತಾಂಬರ ರವಿಶತ ಕಿರಣ ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ ಒಡೆಯ ಶ್ರೀಪುರಂದರ ವಿಠಲನ ಕರುಣ || ೩|| Krushnamurti kanna munde nintidantide ||pa||
Transliteration
Kashtagalella pariharisi mana- Dishtarthagalanella kottu rakshisuvantha || a|| Mastakadali manikyada kirita Kasturi tilakadindeseva lalata Sistili kolalanuduva Ore nota Kaustuba edabaladali olata || 1|| Magamagisuva sobagina suligurulu Ciguru tulasi vanamaleya koralu Bage bage honnunguravitta beralu Sobagina nabiya tavare yaralu ||2|| Ududara vaddyana nikilabarana Uduge pitambara ravisata kirana K…