Haridasa Sahitya — Vyasadasa

Krishna enna kashta

ಕೃಷ್ಣಾ ಎನ್ನ ಕಷ್ಟ

Composer: Haridasa · Deity: Vishnu · Genre: Dasara Pada

Kannada lyrics

ಕೃಷ್ಣಾ ಎನ್ನ ಕಷ್ಟ ಹರಿಸೊ ಜಿಷ್ಣು ಸಾರಥಿಯೆ ||pa|| ಪಾದ ಮುಟ್ಟಿ ಭಜಿಸುವರ ಇಷ್ಟಾರ್ಥಗಳನೀವೆ ಸೃಷ್ಟಿಗೊಡೆಯ ದೇವ ||a.pa|| ಶಿಲೆಯಾದಹಲ್ಯೆಯ ದುರಿತವ ತರಿದೆ ಸಲಿಲ ಮಡುವಿಲಿ ಮಕರದಿ ಕರಿಯ ರಕ್ಷಿಸಿದೆ ಸುಲಭದಿಂದಜಮಿಳನ ದುರಿತವ ತರಿದೆ ಕಲಿ ಸುಯೋಧನನ ಓಲಗದಿ ಗರ್ವ ಮುರಿದೆ ||1|| ವಿಶ್ವರೂಪನು ನೀನೆ ವಿಶ್ವವ್ಯಾಪಕನೆ ವಿಶ್ವೋದರನೆ ಕೃಷ್ಣಾ ವಿಶ್ವನಾಟಕನೆ ವಿಶ್ವಬಾಯೊಳು ತೋರ್ದ ವಿಶ್ವೋದ್ಧಾರಕನೆ ವಿಶ್ವಮಯನೆ ಸರ್ವ ವಿಶ್ವನು ನೀನೆ||2|| ಅಗಣಿತ ಮಹಿಮ ಆಶ್ಚರ್ಯನು ನೀನೆ ಬಗೆ ಬಗೆ ನಾಮಗಳಿಂದ ಪೂಜಿತನೆ ಖಗವರವಾಹನ ಕಂಸ ಮರ್ದನನೆ ನಿಗಮಗೋಚರ ನಿತ್ಯತೃಪ್ತನು ನೀನೆ ||3|| ಕನಕಗರ್ಭನ ಪಿತ ಕರುಣದಿ ಸಲಹೊ ಇನಕುಲ ತಿಲಕ ಸುಂದರ…

Transliteration

Krushna enna kashta hariso jishnu sarathiye ||pa|| Pada mutti Bajisuvara Ishtarthagalanive srushtigodeya deva ||a.pa|| Sileyadahalyeya duritava taride Salila maduvili makaradi kariya rakshiside Sulabadindajamilana duritava taride Kali suyodhanana Olagadi garva muride ||1|| Visvarupanu nine visvavyapakane Visvodarane krushna visvanatakane Visvabayolu torda visvoddharakane Visvamayane sarva visvanu…