Haridasa Sahitya — Vyasadasa
Krishna enikyakaiyya
ಕೃಷ್ಣಾ ಎಣಿಕ್ಯಾಕೈಯ್ಯ
Composer: Mahipati Dasaru · Deity: Vishnu · Genre: Dasara Pada
Kannada lyrics
ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ ತುಟ್ಟಿ ಮಿಸುಕಬಾರದು ನೋಡಬ್ಯಾಡ ಗುಟ್ಟು ಒಡೆದ ಮ್ಯಾಲುಳಿಯದು ಗೂಢ ಇಷ್ಟರಮೇಲೆ ತಿಳಿಯದ ನಾ ಮೂಢ ||1|| ಅಂದು ಏನಾಗಿತ್ತೈಯ್ಯ ನಿಮ್ಮ ಬುಧ್ದಿ ಬಂದು ಗೊಲ್ಲರೊಡನೆ ಕೂಡ್ಯಾಕಿದ್ದಿ ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ ||2|| ಕುಬ್ಜೆ ಕೂಡಿಕೊಂಬಾಗ ನೋಡಲಿಲ್ಲಿ ನಿಜಪದಕ ಯೋಗ್ಯಳ ಮಾಡಲಿಲ್ಲಿ ಅಜಮಿಳನೆಷ್ಟೆಂದು ಅರಿಯಲಿಲ್ಲಿ ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ ||3|| ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು ನಿಮ್ಮ ಮಾತು ಒಡಿಯದು ಉದ್ದಂಡು ಇಮ್ಮನಾಗದಲ್ಲಿಂದ ಮನಗಂಡು ಬ್ರಹ್ಮಾನಂದ ಕೊಂಡಾಡುವೆ ಘನನುಂಡು ||4|| ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ…
Transliteration
Krushna enikyakaiyya namma kuda Tuti misukabaradu nodabyada Guttu odeda myaluliyadu gudha Ishtara mele tiliyada na mudha ||1|| Andu enagittaiyya nimma buddhi Bandu gollarodane kodyakiddi Sandhisyavaruccishtavemdu ni meddi Indu byare nodalikke marada suddi ||2|| Kubaja kudikombaga nodalille Nijapadaka yogyala madalille Ajamilaneshtendu ariyalille Sojigellanu nimmadu na balle ||3|| Summanirabekenna…