Haridasa Sahitya — Vyasadasa

Krishna ena barade

ನರಜನ್ಮ ಬಂದಾಗ ನಾಲಿಗೆ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನಬಾರದೆ ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ಸ್ನಾನ ಪಾನ ಜಪ ತಪಗಳ ಮಾಡುತ ಕೃಷ್ಣ ಎನಬಾರದೆ ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ ಕೃಷ್ಣ ಎನಬಾರದೆ ಮೇರೆ ತಪ್ಪಿ ಮಾತನಾಡುವಗಲೊಮ್ಮೆ ಕೃಷ್ಣ ಎನಬಾರದೆ ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣ ಎನಬಾರದೆ ತನ್ನ ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ ಪರಿಹಾಸ್ಯದ ಮಾತನಾಡುತಲೊಮ್ಮೆ ಕೃಷ್ಣ ಎನಬಾರದೆ ಪರಿ ಪರಿ ಕೆಲಸದೊಳೊಂದು ಕೆಲಸವೆಂ…

Transliteration

Nara janma bandaga, nalige iruvaga Krishna enabarade Krishnana nenedare kasta ondistilla Krishna enabarade Malagiddu maimuri-delutalomme Krishna enabarade, nitya Sulidaduta maneyolagadaru omme Krishna enabarade||1|| Snana pana japa tapagala maduta Krishna enabarade Salyanna sadrasa tindu trptanagi Krishna enabarade||2|| Mere tappi matanaduvagalomme Krishna enabarade, dodda Dariya nadevaga bharava…