Haridasa Sahitya — Vyasadasa

Krimikitanagi huttidandu harisaranentenalunte

ಕ್ರಿಮಿಕೀಟನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ

Composer: Purandara Dasaru · Deity: Hari · Genre: Ugabhoga

Kannada lyrics

ಕ್ರಿಮಿಕೀಟನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಹರಿಹರಿಣನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಕತ್ತೆ ಕರಡಿಯಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಹಂದಿಶುನಕನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಮರೆತೀಯೆ ಮಾನವ ನಿನ್ನ ಹಿಂದಿನ ಭವಗಳನೊಂದು ಮಾನುಷ ದೇಹ ಬಂದಿತೊ ನಿನಗೀಗ ಬೇಗ ನೆನೆಯೆಲೊ ಪುರಂದರವಿಟ್ಠಲರಾಯನ ||

Transliteration

Krimikitanagi huttidandu harisaranentenalunte Hariharinanagi huttidandu harisaranentenalunte Katte karadiyagi huttidandu harisaranentenalunte Handisunakanagi huttidandu harisaranentenalunte Maretiye manava ninna hindina bavagalanondu Manusha deha bandito ninagiga Bega neneyelo purandaravitthalarayana ||