Haridasa Sahitya — Vyasadasa
Kondadalalave ninnaya keerti
ಕೊಂಡಾಡಲಳವೆ ನಿನ್ನಯ ಕೀರ್ತಿ
Composer: Vadirajaru · Deity: Vishnu · Genre: Dasara Pada
Kannada lyrics
ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ- ಮಂಡಲದೊಳಗೆ ಹಯಗ್ರೀವ ಮೂರ್ತಿ| ವೇದಂಗಳ ಜಲದಿಂದ ತಂದೆ ನೀ ಪೋದ ಗಿರಿಯ ಬೆನ್ನೊಳಾಂತು ನಿಂದೆ| ಮೇದಿನಿಯ ಕದ್ದೊಯ್ದನ ಕೊಂದೆ ಸಂ- ವಾದದಿಂದ ಕಂಬದಿಂದಲಿ ಬಂದೆ|| ಚರಣಾಗ್ರದಲಿ ನದಿಯನು ಪೆತ್ತೆ ತೀಕ್ಷ್ಣ- ಪರಶು ಹಿಡಿಯ ಬಾಹುಜರ ಕಿತ್ತೆ| ನೆರೆನಂಬಿದಗೆ ಸ್ಥಿರಪಟ್ಟವನಿತ್ತೆ ದೊಡ್ಡ ದುರುಳ ಕಾಳಿಂಗನ ಶಿರದಿ ನಿಂತೆ|| ಪತಿವ್ರತೆಯರ ಮಾನ ಭೇದನ ಚತುರ ತುರಗವೇರಿ ನಲಿವನ| ಕ್ಷಿತಿಯೊಳುತ್ತಮ ವಾದಿರಾಜನ ಸ್ವಾಮಿ ಸತತ ರಕ್ಷಿಪ ಶ್ರೀ ಹಯವದನನ||
Transliteration
Kondadalalave ninnaya keerti | Bumandaladolu hayagriva murti | pa | Vedagala jaladinda ni tande | Mandaragiriya bennu atu ninde | Mediniya kaddoydana konde | Sanvadadinda kanbadali ni bande | 1 | Charanagradali nadiyanu pette | Diksha parasu pididu bahajara kitte | Nerenanbidavage sthira pattava nitte | Dodda durula kalingana siradi ninte | 2 | Pativrateyara manabedana | Chatura turagavaneri nalid…