Haridasa Sahitya — Vyasadasa
Kombu kolalanudutta
ಕೊಂಬು ಕೊಳಲನೂದುತ್ತ
Composer: Sripadarajaru · Deity: Vishnu · Genre: Dasara Pada
Kannada lyrics
ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ ||ಪ|| ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ ಬೆಡಗುಗಾರನ ಕೂಡೆ ನುಡಿ ತೆರಳಿತ್ತೆಯವ್ವಾ ||೧|| ಮಾತು ಮನಸು ಬಾರದವ್ವಾ ಸೋತೆವವ್ವಾ ಕೃಷ್ಣಗಾಗಿ ಆತನ ಕಾಣದೆ ಮನ ಕಾತರಿಸುತಿದೆಯವ್ವಾ ||೨|| ಅನ್ನೋದಕ ಒಲ್ಲೆವವ್ವಾ ಕಣ್ಣಿಗೆ ನಿದ್ರೆ ಬಾರದು ಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ ||೩|| ಮನೆಮನೆ ವಾರುತೆಗೆ ಮನವೆಳಸದೆಯವ್ವಾ ಮನಸಿಜಪಿತನೊಡನೆ ಮನ ತೆರಳಿತೆಯವ್ವಾ ||೪|| ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾ ಗೋಪಜನರ ಕೂಡಿದ ಶ್ರೀಪತಿ ರಂಗವಿಠಲಾ ||೫||
Transliteration
Kombu kolalanudutta nambisi podeneyavva Ambujanabage mana hambalisuttideyavva ||pa|| Nadeyalareneyavva adiyidalosavilla Bedagugarana kode nudi teralitteyavva ||1|| Matu manasu baradava sotevavva krushnagagi Atana kanade mana katarisutideyavva ||2|| Annodaka ollevava kannige nidre baradu Mannanegarana kude hennu janma sakeyavva ||3|| Manemane varutege manavelasadeyavva Manasijapitanodane mana teral…