Haridasa Sahitya — Vyasadasa
Komale ramaadeviye
ಕೋಮಲೆ ರಮಾದೇವಿಯ
Composer: Gopala Dasaru · Deity: Lakshmi Devi · Genre: Bhakti
Kannada lyrics
ಕೋಮಲೆ ರಮಾದೇವಿಯ ನೋಡಬನ್ನಿರೇ ಕಮಲಾರಿ ಸಹೋದರಿಯನೀಗ ಬೇಡಬನ್ನಿರೇ ॥ಪ॥ ಇಂದುನಿಭದ ಸುಂದರಿಯರು ಬಂದು ನೋಡಿರೆ ಈ ಕುಂದರದನೆ ಮಂದರೋದ್ಧರನರ್ಧಾಂಗಿಯೇ ॥೧॥ ಭಕ್ತಿಯಿಂದ ಭಜಿಪರಿಗೆ ಮುಕ್ತಿ ಕೊಡುವಳೇ ಶಕ್ತಿ ಯುಕ್ತಿಗಳನೆ ಕೊಟ್ಟು ಆರತಿ ಮಾಳ್ಪಲೇ ॥೨॥ ದಾಸರಾದರೆ ಶ್ರೀಶನ ರಾಣಿ ಪೋಷಿಸುವಳೇ ಗೋಪಾಲವಿಠಲ ಘಾಸಿಮಾಡದೆ ಪೋಷಿಸೆನುವಳೇ ॥೩॥
Transliteration
Komale ramadeviya nodabannire Kamalari sahodariyaniga bedabannire ||pa|| Indunibada sundariyaru bandu nodire I kundaradane mandaroddharanardhangiye ||1|| Baktiyinda Bajiparige mukti koduvale Sakti yuktigalane kottu Arati malpale ||2|| Dasaradare srisana rani poshisuvale Gopalavithala gasimadade poshisenuvale ||3||