Haridasa Sahitya — Vyasadasa
Kolhapura nilaya sarasijalaya
ಕೊಲ್ಹಾಪುರ ನಿಲಯ ಸರಸಿಜಾಲಯ
Composer: Vijaya Dasaru · Deity: Lakshmi Devi · Genre: Bhakti
Kannada lyrics
ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ ವಲ್ಲಭೆ ಬಲು ಸುಲಭೆ ||pa|| ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ ಲೋಕ ಜನನಿ ಕಾಮಿನಿಸಾಕಾರ ಗುಣವಂತೆ ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ||1|| ಕೋಲ ಮುನಿಗೊಲಿದಮಲ ಮೃಗನಾಭಿ ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ2||2|| ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ ರವರವ ನರಕದಲ್ಲಿ ಬವಣೆಪಟ್ಟ ಮೇಲೆ ಸವಿಯದಂತೆ ತಮಸುನಿವಹದೊಳಗೆ ಇಪ್ಪನು ||3|| ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು ತಾಮಸಗಳ ಕಳೆದು ನಿಷ್ಕಾಮ ಫಲ ಪಾಲಿಪೆ ||4|| ಧರೆಯೊಳು ಷೋಡಶಗಿರಿಯ ಪ್ರಾದೇಶ ಮಂ ದಿರ ರಚಿಸಿಕೊಂಡು ಇಪ್ಪೆ ವರವ ಕೊಡುವೆ ನಿತ…
Transliteration
Kolhapura nilaya sarasijalaya hari Vallabe balu sulabe ||pa|| Mukasurana kondu mukambikeniside Loka janani kaminisakara gunavante Sri kamale ellina kane ninage sama ||1|| Kola munigolidamala mruganabi Pale sajjanara palebale jatarahite Lile nana pushpamale kamalahaste2||2|| Sivadurge ninendu sravanamadalu manuja Ravarava narakadalli bavanepatta mele Saviyadamte tamasunivahadolage ippanu ||3|| Kama…