Haridasa Sahitya — Vyasadasa

Kolalanuduva chaduranyare

ಕೊಳಲನೂದುವ ಚದುರನ್ಯಾರೆ

Composer: Vyasarajaru · Deity: Krishna / Govinda / Mukunda · Genre: Bhakti

Kannada lyrics

ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ ತಳಿರಂದದಿ ತಾ ಪೊಳೆವ ಕರದಿ ಪಿಡಿದು ||pa|| ನಾದದಿ ತುಂಬಿತು ಗೋವರ್ಧನಗಿರಿಯಾದವಕುಲ ಘನ ಒರೆದಿತು ಖಗಕುಲ ಸಾಧಿಸಿ ನೋಡಲು ಕೃಷ್ಣನ ಈಗಲೆಸಾಧ್ಯವೆ ನೀ ಬೃಂದಾವನದೊಳು||1|| ಮೇವು ಮರೆತವು ಗೋವುಗಳೆಲ್ಲವುಸಾವಧಾನದಿ ಹರಿದಳು ಯಮುನಾ ಆವು ಕಾವುತಲಿ ಗೋವಳರೆಲ್ಲರಹಾವ ಭಾವದಲಿ ಬೃಂದಾವನದೊಳು ||2|| ಸುರರು ಸುರಿದರಾಕಾಶದಿ ಸುಮಗಳಸರಿದು ಪೋಗಿ ನೋಡೆ ಬೃಂದಾವನದೊಳು| ಸಾರಿ ಸಾರಿ ಈ ಕೃಷ್ಣನು ಈಗಲೆತುರಗಳ ಕಾಯ್ವ ಕದಂಬ ವನದೊಳು ||3||

Transliteration

Kolalanuduva chaduranyare pelammayya | Talirandadi tapolevakaradi pididu | Nadadi tumbitu govardhanagiri | Yadavakulanaba nereditu Kagakula Sadhisi nodalu krushnana Igale | Sadhyavene brundavanadolu ||1|| Mevu maretavu govugalellavu | Savadhanadi haridalu yamuna Avu kavutali govalarellaru | Havabavadali brundavanadolu ||2|| Suraru suridarakasadi sumamale | Saridu pogi node brundavanadolu | Sari sa…