Haridasa Sahitya — Vyasadasa

Koduvavanu ninu kombuvanu nanu

ಕೊಡುವವನು ನೀನು ಕೊಂಬುವನು ನಾನು

Composer: Vijaya Dasaru · Deity: Hari · Genre: Bhakti

Kannada lyrics

ಕೊಡುವವನು ನೀನು ಕೊಂಬುವನು ನಾನು ಬಡಮನದ ಮನುಜನ ಬೇಡಿ ಫಲವೇನು ।।ಪ।। ಹದಿನಾರು ಹಲ್ಲುಗಳ ಬಾಯ್ದೆರೆದು ಬೇಡಿದರೆ ಇದು ಸಮಯವಲ್ಲೆಂದು ಪೇಳಿ ತಾನು ಮದನಕೇಳಿಗೆ ನೂರನೊಂದಾಗಿ ನೋಡುವನು ಮದಡ ಮಾನವನೇನು ಕೊಡಬಲ್ಲ ಹರಿಯೆ ।।೧।। ಗತಿಯಿಲ್ಲವೆಂತೆಂದು ನಾನಾ ಪ್ರಕಾರದಲ್ಲಿ ಮತಿಗೆಟ್ಟು ಪೊಗಳಿದರೆ ತನ್ನ ಸತಿ-ಸುತರ ಕೇಳಬೇಕೆಂದು ಮೊಗತಿರುಹುವ ಅತಿದುರುಳ ಮತ್ತೇನು ಕೊಡಬಲ್ಲ ಹರಿಯೆ ।।೨।। ಹೀನವೃತ್ತಿಯ ಜನರಿಗಾಸೆಯನು ಬಡುವುದು ಗಾಣದೆತ್ತು ತಿರುಗಿ ಬಳಲಿದಂತೆ ಭಾನುಕೋಟಿತೇಜ ವಿಜಯವಿಠಲರೇಯ ನೀನಲ್ಲದನ್ಯತ್ರ ಕೊಡುಕೊಂಬರುಂಟೇ ।।೩।।

Transliteration

Koduvavanu ninu kombuvanu nanu Badamanada manujana bedi palavenu ||pa|| Hadinaru hallugala bayderedu bedidare Idu samayavallendu peli tanu Madanakelige nuranomdagi noduvanu Madada manavanenu kodaballa hariye ||1|| Gatiyillaventendu nana prakaradalli Matigettu pogalidare tanna Sati-sutara kelabekendu mogatiruhuva Atidurula mattenu kodaballa hariye ||2|| Hinavruttiya janarigaseyanu baduvudu Ganadett…