Haridasa Sahitya — Vyasadasa
Kesavanolumeyu Aguva tanaka
ಕೇಶವನೊಲುಮೆಯು ಆಗುವ ತನಕ
Composer: Kanakadasaru · Deity: Hari · Genre: Philosophy
Kannada lyrics
ಕೇಶವನೊಲುಮೆಯು ಆಗುವ ತನಕ ಹರಿ ದಾಸರೊಳಿರುತಿರು ಹೇ ಮನುಜ ||ಪ|| ಕ್ಲೇಶಪಾಶಂಗಳ ಹರಿದು ವಿಲಾಸದಿ ಶ್ರೀಶನ ನುತಿಗಳ ಪೋಗಳುತ ಮನದೊಳು ||ಅ.ಪ.|| ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆ ಹೋದರೆ ಹೋದೀತೆ ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆ ಬಿಟ್ಟೀತೆ ಭಾಷೆಯ ಕೊಟ್ಟು ನಿರಾಶೆಯ ಗೈದ ಫಲ ಕ್ಲೇಶವ ಗೊಳಿಸದೆ ಇದ್ದೀತೆ ಭೂಸುರಸರ್ವಸ್ವವ ಹ್ರಾಸ ಮಾಡಿದ ಫಲ ಏಸೇಸು ಜನುಮಕು ಬಿಟ್ಟೀತೆ ||೧|| ಜೀವನ ವಶದೊಳು ನಾನಾ ದ್ರವ್ಯವಿರೆ ದಾನ ಧರ್ಮಕೆ ಮನಸಾದೀತೆ ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯ ಅಳಿದ್ಹೋದೀತೆ ಮಾನಿನಿ ಮನಸು ನಿಧಾನವಿರದಿರೆ ಮಾನಾಭಿಮಾನಗಳು ಉಳಿದೀತೇ ಭಾನುಪ್ರಕಾಶನ ಭಜನೆಯ ಮಾಡದ ಹೀನಗೆ ಮುಕುತಿಯು ದೊರ…
Transliteration
Kesavanolumeyu Aguva tanaka hari Dasarolirutiru he manuja ||pa|| Klesapasangala haridu vilasadi Srisana nutigala pogaluta manadolu ||a.pa.|| Mosadi jivara gasi madida papa Kasige hodare hodite Srisana Bakutara dushisida Pala Kasu kottare bittite Basheya kottu niraseya gaida Pala Klesava golisade iddite Busurasarvasvava hrasa madida Pala Esesu janumaku bittite ||1|| Jivana vasadolu nana dravyavire…