Haridasa Sahitya — Vyasadasa

Eesha ninna charana bhajane

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು

Composer: Kanaka Dasaru · Deity: Keshava · Genre: Bhakti

Kannada lyrics

ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು ದೋಶರಾಶಿ ನಾಶಮಾಡು ಶ್ರೀಶ ಕೇಶವ || ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ | ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||೧|| ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ|| ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ ||೨|| ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ || ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||೩|| ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ || ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ ||೪|| ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ || ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ ||೫|| ಕವಿದುಕೊಂಡು ಇರುವ ಪಾಪ |…

Transliteration

Isha ninna charana bhajane Asheyinda madu venu dosharashi nashamadu shreesha keshava ||1|| Sharanu hokkenayya yenna marana samayadalli ninna charana smarane karunisayya narayana ||2|| Shodhisenna bhavada kalusha bhodisayya gyanavenage badhisuva yamana badhe bidisu madhava ||3|| Hindaneka yonigalali bandu bandu nondenayya indu bhavada bandha bidisu tande govinda ||4|| Bhrashtanenisa beda krishna is…