Haridasa Sahitya — Vyasadasa
Kelirai sivasaranaru helalanjike
ಕೇಳಿರೈ ಶಿವಶರಣರು ಹೇಳಲಂಜಿಕೆ
Composer: Kanakadasaru · Deity: Shiva / Rudra Devaru · Genre: Philosophy
Kannada lyrics
ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು||pa|| ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈ||a.pa|| ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗಬೇರೊಂದು ಲಿಂಗ ಬೆಲೆ ಮಾಡಿ ತಂದು ತೋರುವಂಗೈಲಿಟ್ಟು ತೋಯ ಪುಷ್ಪವ ನೀಡಿಯಾರ ಮನಕೊಪ್ಪಿಸುವರೀ ಶೀಲವಂತರು ||1|| ಲಿಂಗವೊಂದು ತನ್ನೊಳು ಲೀನವಾಗಿರುವಾಗಅಂಗಭವಿಗಳು ಕೂಡಿ ಆಡಿಕೊಂಬರು ಅಂಗದನುಭವದರ್ಥವನರಿಯದ ಇಂತಹಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ |2|| ನಾಗಲಿಂಗ ತನ್ನೊಳು ನಾಟ್ಯವಾಡುತಲಿರಲುಆಗಮಿಸಿದ ಲಿಂಗವ ಬೆದಕಲೇತಕ್ಕೆ ಕಾಗಿನೆಲೆಯಾದಿಕೇಶವನೆ ನಾಗಶಯನನಾಗಿರಲು ಬೇರೊಂದನರಸಲೇತಕ್ಕೆ ||3||
Transliteration
Kelirai sivasaranaru helalanjike Avudu ||pa|| Balanetrana baktarintu nodikollirai ||a.pa|| Murulinga tannolu mukyavagiruvaga Berondu linga bele madi tandu Toruvangailittu toyapushpana nidi Yara manakoppisuvari silavantaru ||1|| Lingavondu tannolu linavagiruvaga Angabavigalu kudi adikombaru Angadanubavadarthavanariyada intaha Bangi huccarella Sivana Baktarahare ||2|| Nagalinga tannolu natyavadutira…