Haridasa Sahitya — Vyasadasa

Kayo kaveri ranga karunya

ಕಾಯೋ ಕಾವೇರಿರಂಗ | ಕಾರುಣ್ಯಪಾಂಗಾ

Composer: Vadirajaru · Deity: Vishnu · Genre: Dasara Pada

Kannada lyrics

ಕಾಯೋ ಕಾವೇರಿರಂಗ | ಕಾರುಣ್ಯಪಾಂಗಾ ||pa|| ಕಾಯೊ ಕಾಯೊ ಕಾವೇರಿ ನಿಲಯನೆ ಕಾಯೊ ವಾಙ್ಮನ ಪೂರ್ವಕದಿ ತವ ತೋಯಜಾಂಘ್ರಿಯ ನಂಬಿದೆನುಭವ ಮಾಯಗೆಲುವ ಉಪಾಯ ತೋರಿ ||a.pa|| ದೇವಾಧಿದೇವ ನೀನು | ಪ್ರಣತ ಜನರಿಗೆ ದೇವತರು ಮಣಿಧೇನು | ಎಂದರಿತು ನಿಷ್ಟಿಲಿ ಧಾವಿಸಿ ಬಂದೆ ನಾನು | ರಘುವಂಶ ಭಾನು ಕಾವನಯ್ಯ ನೀನೊಲಿದು ಕರುಣದಿ ಪಾವಮಾನಿಯ ಶಾಸ್ತ್ರವರಿತು ಭಾವ ಭಕ್ತಿಲಿ ನಿನ್ನ ಪಾಡುವ ಕೋವಿದರ ಸೇವಕನ ಮಾಡಿ ||1|| ಪನ್ನಂಗಪತಿಶಯನ | ಶಿರಬಾಗಿ ಪ್ರಾರ್ಥಿಪೆ ಪನ್ನಂಗರಿಪುವಾಹನ | ಎನ್ನಪರಾಧವ ಮನ್ನಿಸೊ ಹಯವದನ | ವೈಕುಂಠ ಸದನ ನಿನ್ನನುಗ್ರಹ ಪೂರ್ಣಪಡೆದು ಜಗನ್ನಾಥದಾಸರ ಸನ್ನಿಧಾನದಿಂ ಬಂದೆ ತಂದೆ ||2|| ನೇಸರ ಕುಲಜಾತ | ವೇದೋಕ್ತಕ್ರ…

Transliteration

Kayo kaveri ranga karunya panga ||pa.|| Kayo kayo kaveri nilayane kaya va~gmanapurnadallindu Toyajanghriya nambideno bhava maya geluva upaya tori ||a.pa.|| Devadhideva ninu pranatajanarige devatarumanidhenu Endaritu nishthili dhavisi bande nanu raghuvamsha bhanu | Kavanayya ni olidu karunadi pavamaniya shastravaritu Bhavabhakutili ninna paduva kovidara sevakana madi ||1|| Pannangapati shayana shir…