Haridasa Sahitya — Vyasadasa
Kaye durga ambruniye
ಕಾಯೆ ದುರ್ಗಾಂಭ್ರಣಿಯೆ |
Composer: Haridasa · Deity: Lakshmi Devi · Genre: Dasara Pada
Kannada lyrics
ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ ಕಾಯೆ ಕಾಯೆ ಶುಭ ಕಾಯೆ ದಯದಿ ಹರಿ ಕಾಯ ನಿಲಯೆ ವಿಧಿ ಕಾಯಜ ತಾಯೆ || ಮಾಕುಮತಿ ಶ್ರೀಕರಳೆ | ಪೋತನ ನುಡಿ ಕೇಳೆ ಭೀಕರಳೆನಿಸುತ | ವ್ಯಾಕುಲಗೊಳಿಸದೆ ನೀಕರುಣಿಸು ರತ್ನಾಕರನ ಮಗಳೆ || ಸೀತೆ ಸಾರಸನಯನೆ | ಶೀತಾಂಶುವಿನ ಭಗಿನಿ ಮಾತೆ ನಮಿಪೆ ತವ | ಘಾತಕ ವ್ರಾತದ ಭೀತೆಯ ತೋರದೆ | ಪ್ರೀತಿಯಿಂದೊಲಿದು || ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿ ಈಕ್ಷಣ ಕರುಣಕವಾಕ್ಷದಿಂದೀಕ್ಷಿಸು ಪೇಕ್ಷವ ಮಾಡದೆ ಮೋಕ್ಷದಾಯಕಳೆ|| ವಟದೆಲೆಯೊಳು ಮಲಗಿರುವ | ವಟುರೂಪಿ ಪತಿಪದವ ಪಠಿಸುತಬ್ಜಸೀಕರ | ಪುಟದಿ ನಮಿಸುವಂಥ ಕುಟಿಲರಹಿತೆ ಶತ | ತಟಿತ ಸನ್ನಿಭಳೆ|| ಭಾಮೆ ಶ್ರೀ ಭೂಸುತೆಯೆ | ಶಾಮಸುಂದರ…
Transliteration
Kaye durgambraniye | kaye sri rukminiyesuba kaye dayadi hari Vidhi kayaja taye ||pa|| Makumati srikarale | potana nudi kele Bikaralenisuta | vyakulagolisade Nikarunisu ratnakarana magale ||1|| Site sarasanayane | sitamsuvina Bagini Mate namipe tava | gataka vratada Biteya torade | pritiyindolidu ||2|| Lakshmikruti santi aksharale jayavanti Ikshana karunakavakshadindikshisu Pekshava madade mokshada…