Haridasa Sahitya — Vyasadasa

Katiyalli karavittano

ಕತಿಯಳಿ ಕರವಿತ್ತನೋ ಪನ್ಧರಿರಯ

Composer: Purandara Dasaru · Deity: Vitthala · Genre: Dasara Pada

Kannada lyrics

ಕಟಿಯಲ್ಲಿ ಕರವಿಟ್ಟನು ಪಂಡರಿರಾಯ||ಪ|| ರಾಜಸೂಯಯಾಗದಲ್ಲಿ ರಾಜೇಶ್ವರ ರಾಜರು ಮೊದಲಾದ ಸುರರೆಲ್ಲರು ಭೋಜನವನ್ನೆ ಮಾಡಿದೆಂಜಲು ಮೊದಲಾದ್ದು ರಾಜೀವಾಕ್ಷನು ಎತ್ತಿದಾಯಾಸದಿಂದಲೋ || ಗೊಲ್ಲಬಾಲಕರೊಡಗೂಡಿ ತಾ ಬಂದು ಗೊಲ್ಲತೇರ ಮನೆ ಪೊಕ್ಕು ಬೆಣ್ಣೆಯ ತಿಂದು ಬಲ್ಲಿದ ತೃಣಾವರ್ತ ಮೊದಲಾದಸುರರನ್ನು ಎಲ್ಲರನ್ನು ಕೊಂದ ಆಯಾಸದಿಂದಲೊ || ಮುದದಿಂದ ವ್ರಜದ ಹದಿನಾರು ಸಾವಿರ ವನಿತೆಯರಾಳಿದ ಮದದಿಂದಲೊ ಮದಗಜಗಮನೇರ ಮಧುರಾಂತಕನ ಒದಗಿ ಮಾವನ ಕೊಂದ ಆಯಾಸದಿಂದಲೊ || ಧರಣಿಯನು ತಂದ ದನುಜ ಹಿರಣ್ಯಕನ ಕೋರೆದಾಡೆಯಿಂದ ಸೀಳಿದಿಂದಲೊ ವಾರಿಜಮುಖಿ ಸರ್ವಕಾಲದಲಿ ನಿಂತು ಸೇರಿ ಸುರತ ಮಾಡಿದಾಯಾಸದಿಂದಲೊ || ಸುರಪ ತನಯಗೆ ಸಾರಥ್ಯವನು ಮಾಡಿ ಭರದಿಂದ…

Transliteration

Katiyalli karavittano pandhariraya Golla balakarodagudi ta bandu Gollatiyara mane kaddu benneya tindu Ballida trunavarta modalada asurara Mellane kondayasadindalo ||katiyalli|| Mudadinda vrajada hadinaru savira Sudatiyaralida madadindalo Madagajagamaneyara madadantaka krushna Odagi mavana konda ayasadimdalo ||katiyalli|| Rajasuyayagadalli rajesvara Rajaru modalada surarellaru Bojanavanu madidenjal…