Haridasa Sahitya — Vyasadasa
Karunya muriteye
ಕಾರುಣ್ಯ ಮೂರಿತೆಯೆ
Composer: Purandara Dasaru · Deity: Shiva / Rudra Devaru · Genre: Bhakti
Kannada lyrics
ಕಾರುಣ್ಯ ಮೂರಿತೆಯೆ ಕಂಗಳು ಮೂರುಳ್ಳ ದೊರೆಯೆ ||ಪ|| ಧಾರಿಣಿಯೊಳಗೆ ನಿನಗೆ ಎಣೆಯೆ ಗುರುದೇವ ಶಿಖಾಮಣಿಯೆ ||ಅ.ಪ|| ಗುಹಾಸುರ ಮರ್ದನನೆ ಖವೃಷ ವಾಹನನೆ ಗಜಚರ್ಮ ಪೀತಾಂಬರನೆ ಮಹಾದೇವ ಮಾಧವ್ನೆ ||೧|| ತ್ರಿಪುರಾವಳಿ ಸಂಗರನೆ ತ್ರೈಲೋಕ್ಯ ಪಾವನನೆ ಅಪಾರ ಮಹಿಮನೆ ಪ್ರಸನ್ನ ಶ್ರೀ ಹರಿಹರನೆ ||೨|| ತುಂಘಾ ಭದ್ರದಡಿಯ ತಾಳಿಪ್ಪೆ ಗಂಗೆಯ ಜಡೆಯ ಪುರಂದರವಿಠಲನ ಪ್ರಿಯ ನೀ ಸಲಹಯ್ಯ ಎನ್ನೊಡೆಯ ||೩||
Transliteration
Karunya muriteye kangalu murulla doreye ||pa|| Dhariniyolage ninage eneye gurudeva sikamaniye ||a.pa|| Guhasura mardanane kavrusha vahanane Gajacharma pitambarane mahadeva madhavne ||1|| Tripuravali sangarane trailokya pavanane Apara mahimane prasanna sri hariharane ||2|| Tunga badradadiya talippe gangeya jadeya Purandaravithalana priya ni salahayya ennodeya ||3||