Haridasa Sahitya — Vyasadasa

Karuniyembe karunabdhiyembe

ಕರುಣಿಯೆಂಬೆ ಕರುಣಾಬ್ಧಿಯೆಂಬೆ

Composer: Prasanna Venkata Dasaru · Deity: Vishnu · Genre: Dasara Pada

Kannada lyrics

ಕರುಣಿಯೆಂಬೆ ಕರುಣಾಬ್ಧಿಯೆಂಬೆ ಶರಣು ಶರಣೆಂಬೆ ||ಪ|| ಪರಮ ಭಾಗವತರ ಅರಿಗಳ ತರಿದು ನೀ ನರಕ ತಪ್ಪಿಸಿ ನಿಜ ಪುರಕೊಯ್ಯುವೆಯೆಂದು ||ಅಪ || ತಾಯಿಯೆಂಬೆ ತವರೂರೆಂಬೆ ತ್ರಾಹಿ ತ್ರಾಹಿ ಎಂಬೆ ಬಾಯೆಂಬೆ ಮಾನವರ ಘಾಯಗಾಣಿಸುತಿರೆ ನೀಯಜಾಮಿಳಗಾಶ್ರಯನಿತ್ತೆಯೆಂದಿ ||೧|| ತಾತನೆಂಬೆ ಅದ್ಯಾಪ್ತನೆಂಬೆ ನಾಥನಾಥೆಂಬೆ ಪಾತಕ ಕೌರವರಾಂತಕ ಬಿಡಿಸಿ ಸಂ- ಪ್ರೀತಿಲಿ ಪಾಂಡವರ ಕಾಯುವೆಯೆಂದು ||೨|| ಏಕನೆಂಬೆ ಅನೇಕನೆಂಬೆ ಸಾಕು ಸಾಕು ಎಂಬೆ ಶ್ರೀ ಕಾಂತ ಪ್ರಸನ್ವೆಂಕಟೇಕಾಂತ ದಾಸರ ಬೇಕಾಗಿ ದಡಾ ನೂಕುವೆಯೆಂದು ||೩||

Transliteration

karuNiyeMbe karuNAbdhiyeMbe SaraNu SaraNeMbe ||pa|| parama BAgavatara arigaLa taridu nI naraka tappisi nija purakoyyuveyeMdu ||apa || tAyiyeMbe tavarUreMbe trAhi trAhi eMbe bAyeMbe mAnavara GAyagANisutire nIyajAmiLagASrayanitteyeMdi ||1|| tAtaneMbe adyAptaneMbe nAthanAtheMbe pAtaka kauravarAMtaka biDisi saM- prItili pAnDavara kAyuveyendu ||2|| EkaneMbe anEkaneMbe sAku sAku eMbe SrI kAnta prasanven…