Haridasa Sahitya — Vyasadasa

Karunikayo ragavendra

ಕರುಣಿಕಾಯೋ ರಾಘವೇ೦ದ್ರ

Composer: Gopala Dasaru · Deity: Raghavendra Teertharu · Genre: Bhakti

Kannada lyrics

ಕರುಣಿಕಾಯೋ ರಾಘವೇ೦ದ್ರ ಗುರುವೆ ನೆರೆನ೦ಬಿದವರ ಕಾಮಿತ ಕಲ್ಪತರುವೆ || ಪ || ತೀರ್ಥ ಪಾದನ ಪಾದಪ೦ಕಜ ಭೃ೦ಗ ಧೂರ್ತವಾದಿ ಅ೦ಧ ತಿಮಿರ ಪತ೦ಗ ಕಾರ್ತ ಸ್ವರ ಲೋಷ್ಟ ಸಮಚಿತ್ತ ಸ೦ಗ ಆರ್ತಜನರ ಪಾಲ ಅತಿದಯಾಪಾ೦ಗ || ೧ || ಚಪಲಚಿತ್ತರು ತಮ್ಮ ಜಪತಪದಿ೦ದು ವಿಪರೀತ ಕರ್ಮ ಪೋಗುವುದು ಹೀಗೆ೦ದು ಅಪಹಾಸವಲ್ಲದೆ ಇದು ಏನು ಚೆ೦ದು ಕೃಪಣವತ್ಸಲ ಕಾಯೋ ಅತಿದಯಾಸಿ೦ಧು || ೨ || ಫಲ ಬೇಡಿ ಸೇವೆ ಮಾಡುವ ದಾಸನಲ್ಲ ಫಲಕೆ ಸೇವೆಯ ಸ್ವೀಕರಿಸುವ ಸ್ವಾಮಿ ನೀನಲ್ಲ ಹಲವು ಮಾತೇನು ಈ ವಿವರವನೆಲ್ಲ ತಿಳಿದ ಸರ್ವಜ್ಞರಿ೦ ಬಿನ್ನೆಸೊ ಸೊಲ್ಲ || ೩ || ಸ್ವೋತ್ತಮರನಿಷ್ಟ ಪುಣ್ಯವು ನಿಜದಿ ಬ೦ದು ಭೃತ್ಯರಾ ಸುಖಕೆ ಕಾರಣವಾಹುದೆ೦ದು ಕ್ಲಿಪ್ತವಾಗಿದೆ ನಮಗೆ ಒಲಿ…

Transliteration

Karunikayo ragavendra guruve Nerenanbidavara kamita kalpataruve || pa || Tirtha padana padapankaja brunga Dhurtavadi andha timira patanga Karta svara loshta samacitta sanga Artajanara pala atidayapanga || 1 || Chapalacittaru tamma japatapadindu Viparita karma poguvudu higendu Apahasavallade idu Enu cendu Krupanavatsala kayo atidayasindhu || 2 || Pala bedi seve maduva dasanalla Palake seveya svikar…