Haridasa Sahitya — Vyasadasa

Karunigalolagene kaneno

ಕರುಣಿಗಳೊಳಗೆಣೆ ಕಾಣೆನೊ

Composer: Jagannatha Dasaru · Deity: Raghavendra Teertharu · Genre: Dasara Pada

Kannada lyrics

ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ ದ್ಗುರುವರ ರಾಘವೇ೦ದ್ರ || ಪ || ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ ಹರಕೆಯ ನಿರುತದಲೀವೆ-ನೀ ಕಾವೇ || ಅ || ರಾಘವೇ೦ದ್ರ ಗುರುವೇ ಗತಿ ಎ೦ದನು ರಾಗದಿ೦ದಲಿ ಭಜಿಪ ಭಾಗವತರ ದುರಿತೌಘಗಳಳಿದು ಚೆ ನ್ನಾಗಿ ಸ೦ತೈಸುವೆ ನೀ-ಸನ್ಮೌನಿ || ೧ || ಸುಧೀ೦ದ್ರಯತಿಕರ ಪದುಮಸ೦ಭವ ಮಧು ವಧ ಪಾದಾ೦ಬುಜ ಮಧುಪ ತ್ರಿದಶಭೂರುಹದ೦ತೆ ಬುಧರೀಪ್ಸಿತ ಒದಗಿ ಪಾಲಿಸಿ ಪೊರೆವೆ-ಮದ್ಗುರುವೆ || ೨ || ಕುಧರದೇವನ ದಿವ್ಯರದನದಿ ಜನಿಸಿದ ನದಿಯ ತೀರದಿ ಶೋಭಿಪ ಸದಮಲ ಘನ ಮ೦ತ್ರಸದನನಿಲಯ ಜಿತ ಮದನ ಶ್ರೀ ಜಗನ್ನಾಥವಿಠ್ಠಲನ ದೂತ || ೩ ||

Transliteration

Karunigalolagene kaneno ninage sa Dguruvara ragavendra || pa || Carana kamalayugma morehokkavara manada Harakeya nirutadalive-ni kave || a || Ragavendra guruve gati endanu Ragadindali Bajipa Bagavatara duritaugagalalidu ce Nnagi santaisuve ni-sanmauni || 1 || Sudhindrayatikara padumasanbava madhu Vadha padanbuja madhupa Tridasaburuhadante budharipsita Odagi palisi poreve-madguruve || 2 || Kudharad…