Haridasa Sahitya — Vyasadasa
Karunadhi enna
ಕರುಣದಿ ಎನ್ನ
Composer: Jagannatha Dasaru · Deity: Lakshmi Devi · Genre: Dasara Pada
Kannada lyrics
ಕರುಣದಿ ಎನ್ನ ಪೊರಿಯೇ ತೊರಮ್ಮ ಶಿರಿಯೇ || ಶರಣರ ಪೊರೆಯುವ ಕರುಣಿಯೆ ನಿನ್ನಯ ಚರಣಯುಗಕೆ ನಾ ಶರಣು ಮಾಡಿದೆ ದೇವೀ || ವಾರಿಜಾಂಬಕೆ ಅಂಭ್ರಣೀ ಶ್ರೀ ಹರಿಯ ರಾಣಿ ಮಾರಾರಿ ಮುಖಸುರ ಸಂತ್ರಾಣಿ ವಾರವಾರಕೆ ನಿನ್ನ ಸಾರಿಭಜಿಪೆ ಎನ್ನ ದೂರ ನೋಡದೆ ಪೊರಿಭಾರ ನಿನ್ನದು ತಾಯಿ || ಸೃಷ್ಟಿ ಸ್ಥಿತಿಲಯ ಕಾರಿಣೀ ಸುಗುಣಸನ್ಮಣಿ ಕಷ್ಟ ದಾರಿದ್ರ್ಯ ದುಃಖ ಹಾರಿಣೀ ದುಷ್ಟರ ಸಂಗದಿ ಕೆಟ್ಟಿಹ ಎನ್ನನು ಥಟ್ಟನೆ ಕರುಣಾದೃಷ್ಟಿಲಿ ನೋಡಿ || ಜಾತರೂಪಳೆ ಶುಭಗಾತ್ರಿ ತ್ರಿಜಗಕೆ ಧಾತ್ರೀ ಸೀತೆ ಸತ್ರಾಜಿತನ ಪುತ್ರಿ ದಾತ ಗುರುಜಗನ್ನಾಥವಿಠಲನ ನೀತ ಸತಿಯೆ ಎನ್ನಮಾತೆ ವಿಖ್ಯಾತೇ ||
Transliteration
Karunadi enna poriye toramma siriye ||pa|| Pacaranayugake na saranu madide devi || a.pa|| Varijambake ambrani sri hariya rani Marari mukasura santrani Varavarake ninna saribajipe enna Dura nodade poribara ninnadu tayi ||1|| Srushti sthitilaya karini sugunasanmani Kashta daridrya duhka harini Dushtara sangadi kettiha ennanu Thattane karunadrushtili nodi ||2|| Jatarupale subagatri trijagake dhatri S…