Haridasa Sahitya — Vyasadasa

Karuna kavacha on vijaya dasaru- by sri gopaladasaru

ಕರುಣಾ ಕವಚ(ಸ್ಮರಿಸುವೆ ನಾ ನಿಮ್ಮ ಚರಣಕಮಲ)

Composer: Gopala Dasaru · Deity: Vijaya Dasaru · Genre: Bhakti

Kannada lyrics

ಸ್ಮರಿಸುವೆ ನಾ ನಿಮ್ಮ ಚರಣಕಮಲ ಗುರೋ ವಿಜಯರಾಯಾ । ಅಯ್ಯ । ಶರಣಜನರಪ್ರಿಯ ಪರಮಕರುಣಾನಿಧಿ ವಿಜಯರಾಯಾ॥ ಪ ॥ ಜನ್ಮಾರಭ್ಯದಿ ನಿಮ್ಮಗುಣಕರ್ಮಂಗಳೆಲ್ಲ ವಿಜಯರಾಯಾ । ಅಯ್ಯ । ಇನ್ನು ನಾ ವರ್ಣಿಸಲೆಷ್ಟರವನೊ ಗುರು ವಿಜಯರಾಯ ॥ 1 ॥ ದಿವಿಜರಾವೇಷದಿಂದವನಿಯೊಳುದಿಸಿದ್ಯೊ ವಿಜಯರಾಯಾ । ಅಯ್ಯ । ದಿವಿಜರಿಂದಲಿ ಪ್ರತಿದಿವಸ ಬಿಡದಲಿದ್ಯೋ ವಿಜಯರಾಯಾ ॥ 2 ॥ ಭಾಗವತಧರ್ಮ ವಹಿಸಿ ತ್ರಿರಾವರ್ತಿ ವಿಜಯರಾಯಾ । ಅಯ್ಯ । ಭಾಗೀರಥಿಯ ಚನ್ನಾಗಿ ಸೇವಿಸಿದಯ್ಯಾ ವಿಜಯರಾಯಾ ॥ 3 ॥ ಕಂಚಿಕಾಳ್ಹಸ್ತಿ ಶ್ರೀರಂಗಸೇತುಯಾತ್ರೆ ವಿಜಯರಾಯಾ । ಅಯ್ಯ । ಪಂಚವಾರವು ಸಂಚರಿಸಿ ಸೇವಿಸಿದಯ್ಯಾ ವಿಜಯರಾಯಾ ॥ 4 ॥ ಮರಿಯಾದೆಯಿಲ್ಲ ದೇವಗಿರಿಯಾತ್ರೆಯು ವಿಜಯರಾಯಾ…

Transliteration

karuna-kavacha Smarisuve na nimma charana kamala guru vijayaraya | Saranajanapriya parama karunanidhi vijayaraya || pa || Janmarabyavu nimmagunakarmagalella vijayaraya | Innu na varnisaleshtaravanu guru vijayaraya || 1 || Divijara veshadindavaniyoludusidyo vijayaraya | Divijarindali pratidivasa bidadalidyo vijayaraya || 2 || Baghavata dharmavahisi triravarti vijayaraya | Bagirathiya channagi sevis…