Haridasa Sahitya — Vyasadasa
Kartha krishnayya
ಕರ್ತಾ ಕೃಷ್ಣಯ್ಯ
Composer: Prasanna Venkata Dasaru · Deity: Krishna · Genre: Dasara Pada
Kannada lyrics
ಕರ್ತಾ ಕೃಷ್ಣಯ್ಯ ನೀ ಬಾರಯ್ಯ । ಎನ್ನಾರ್ತದನಿಗೊಲಿದು ಬಾರಯ್ಯ ॥ ಸುಗುಣದಖಣಿಯೆ ನೀ ಬಾರಯ್ಯ । ಎಮ್ಮಘವ ನೋಡಿಸಲು ನೀ ಬಾರಯ್ಯ । ಧಗೆಯೇರಿತು ತಾಪ ಬಾರಯ್ಯ ಸದಾ । ಮುಗುಳ್ನಗೆ ಮಳೆಗೆರೆಯೆ ಬಾರಯ್ಯ ॥೧॥ ವೈರಿವರ್ಗದಿ ನೊಂದೆ ಬಾರಯ್ಯ । ಮತ್ಯಾರೂ ಗೆಳೆಯರಿಲ್ಲ ಬಾರಯ್ಯ । ಸೇರಿದೆ ನಿನ್ನಯ ಕರುಣೆಗೆ ಬಾರಯ್ಯ । ಒಳ್ಳೆ ದಾರಿಯ ತೋರಲು ಬಾರಯ್ಯ ॥೨॥ ವೈರಾಗ್ಯಭಾಗ್ಯವ ಕೊಡಬಾರಯ್ಯ । ನಾನಾರೋಗದ ಭೇಷಜ ಬಾರಯ್ಯ । ಜಾರುತದಾಯು ಬೇಗ ಬಾರಯ್ಯ । ಉದಾರ ಪ್ರಸನ್ನವೆಂಕಟ ಬಾರಯ್ಯ ॥೩॥
Transliteration
kartA kRuShNayya nI bArayya | ennArtadanigolidu bArayya || suguNadaKaNiye nI bArayya | emmaGava nODisalu nI bArayya | dhageyEritu tApa bArayya sadA | muguLnage maLegereye bArayya ||1|| vairivargadi nonde bArayya | matyArU geLeyarilla bArayya | sEride ninnaya karuNege bArayya | oLLe dAriya tOralu bArayya ||2|| vairAgyaBAgyava koDabArayya | nAnArOgada BEShaja bArayya | jArutadAyu bEga bArayya | udAr…