Haridasa Sahitya — Vyasadasa

Karava mugida mukhyapraana

ಕರವ ಮುಗಿದನು, ಮುಖ್ಯಪ್ರಾಣ

Composer: Gopala Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಕರವ ಮುಗಿದನು, ಮುಖ್ಯಪ್ರಾಣ ಕರವ ಮುಗಿದನು ||ಪ|| ಕರವ ಮುಗಿದ ಶ್ರೀ ಹರಿಯ ಇದಿರಾಗಿ ದುರುಳರ ಸದೆದು ಶರಣರ ಪೊರೆಯೆಂದು || ಅ.ಪ|| ಜೀವೇಶರೈಕ್ಯವು ಜಗತು ಮಿಥ್ಯವೆಂದು ಈ ವಿಧ ಪೇಳುವ ಮಾಯಿಗಳಳಿಯೆಂದು || ಇಲ್ಲಿ ಮಾತ್ರವು ಭೇದ , ಅಲ್ಲಿ ಒಂದೇ ಎಂಬ ಕ್ಷುಲ್ಲಕರನು ಪಿಡಿದ್ಹಲ್ಲು ಮುರಿಯೆಮ್ದು || ತಾರತಮ್ಯ ಪಂಚಭೇದ ಸತ್ಯವೆಂಬ ಮಾರುತಿಮತ ಪೊಂದಿದವರನು ಸಲಹೆಂದು || ಪರಿಪರಿ ಭಕ್ತರ ಹೃದಯದಲಿ ನಿಂದು ನಿರತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು || ಹರಿ ಮಾಡೋ ವ್ಯಾಪಾರ ಬಲ್ಲ ಕಾರಣ ನಮ್ಮ ಪುರಂದರವಿಠಲನ ಚರಣಕ್ಕೆರಗಿ ನಿಂದು ||

Transliteration

Karava mugida mukhyapraana | Karava mugidaa || pa || Karava mugidaa shreeharige eduraagi | Durulara sadedu sajjanara porevenemdu || a. Pa. || Jeeveshvaraikyavu jagattu mithyaa endu | Ee vidha peluva maayigalaliyendu || 1 || Illi maatra bhedha alli onde embo | Kshullakaranu pidid~hallu muriyendu || 2 || Taaratamya pancha bhedha satyavemba | Maaruti mata pondidavaranu salahendu || 3 || Pari pari bha…