Haridasa Sahitya — Vyasadasa
kangaLu celuvanu nODi karNangaLu vArutiya kELi
ಕಂಗಳು ಚೆಲುವನು ನೋಡಿ ಕರ್ಣಂಗಳು ವಾರುತಿಯ ಕೇಳಿ
Composer: Vyasarajaru · Deity: Hari · Genre: Ugabhoga
Kannada lyrics
ಕಂಗಳು ಚೆಲುವನು ನೋಡಿ ಕರ್ಣಂಗಳು ವಾರುತಿಯ ಕೇಳಿ ಹಿಂಗದೆ ನಾಮವ ವದನದಿ ಸವಿಯುತ್ತ ಪದಂಗಳ ಮನದಿ ನೆನೆನೆನೆದು ರೋಮಂಗಳು ಪುಳಕಿತವಾಗಿ ಲೋಕಂಗಳ ಕಡಲೊಳು ಮುಳುಗಿ ಮೈಯುಬ್ಬಿ ಕೊಬ್ಬುತ್ತ ಅಂಗವ ಮೆರೆದಾನಂದದಿ ರಂಗಾ ಎನುತಿದ್ದರೆ ಸಾಲದೆ ಮಂಗಳ ಜಯವನ್ನು ಕರುಣಿಸೋ ಮತ್ತೊಂದು ಸಂಗವನೊಲ್ಲೆನೋ ಸಿರಿಕೃಷ್ಣರಾಯ||
Transliteration
kangaLu celuvanu nODi karNangaLu vArutiya kELi higgade nAmava vadanadi saviyutta padangaLa manadi nenenenedu rOmaggaLu puLakitavAgi lOkangaLa kaDaloLu muLugi maiyubbi kobbutta angava meredAnandadi rangA enutiddare sAlade mangaLa jayavannu karuNisO mattondu sangavanollenO sirikRuShNarAya||