Haridasa Sahitya — Vyasadasa
Kangalige habbavayitayya mangalatmaka
ಕಂಗಳಿಗೆ ಹಬ್ಬವಾಯಿತಯ್ಯಮಂಗಳಾತ್ಮಕ ಪುರಂದರದಾಸರನು
Composer: Haridasa · Deity: Purandara Dasaru · Genre: Dasara Pada
Kannada lyrics
ಕಂಗಳಿಗೆ ಹಬ್ಬವಾಯಿತಯ್ಯಮಂಗಳಾತ್ಮಕ ಪುರಂದರದಾಸರನು ಕಂಡು ||pa|| ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ ಫಲವುರುಕುಮಿಣಿ ಪತಿಯ ಪದ ಭಕುತರನು ಕಂಡು ||1|| ಇವರ ನರರೆಂದವರು ನರಕದಲಿ ಬೀಳುವರುಕವಿಜನರು ಒಪ್ಪಿ ಕೈಹೊಡೆದು ಹೇಳಿರಲುಅವನಿಯೊಳಗತಿ ದುರ್ಲಭವು ನಂದಗೋಪನ್ನಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು |2|| ಧನ್ಯನಾದೆನು ನಾನು ಮನುಜನ್ಮದಿ ಪುಟ್ಟಿಮಾನ್ಯನಾದೆನು ಇನ್ನು ಈ ಜಗದೊಳಗೆಪನ್ನಂಗಶಯನ ಶ್ರೀಕೃಷ್ಣನ ದಾಸರನುಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು ||3||
Transliteration
Kangalige habbavayitayyamangalatmaka purandaradasaranu kandu ||pa|| Sakala tirthakshetra yatre madida Palavusakala Satkarma sadhisida palavubakutiyim bagirathi majjanada Palavurukumini patiya pada Bakutaranu kamdu ||1|| Ivara nararendavaru narakadali biluvarukavijanaru Oppi kaihodedu heliralu^^avaniyolagati durlabavu Nandagopannakuvaraniddedeya vaikunthavembuvara kandu |2|| Dhanyanadenu nanu manuj…