Haridasa Sahitya — Vyasadasa
Kangalidyaatako kaaveri rangana nodada
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
Composer: Sripadarajaru · Deity: Vishnu · Genre: Dasara Pada
Kannada lyrics
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ || ಗಂಗಳೊಳಗೆ ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ || ಅ ಪ || ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲಿ ನಿಂದು ಚಂದ್ರಪುಷ್ಕರಣಿ ಸಾನವ ಮಾಡಿ ಆ ನಂದದಿಂದಲಿ ರಂಗನ ನೋಡದ || ೧ || ಹರಿಪಾದೋದಕ ಸಮ ಕಾವೇರಿ ವಿರಜಾನದಿ ಸಾನವ ಮಾಡಿ ಪರಮ ವೈಕುಂಠ ರಂಗಮಂದಿರ ಪರವಾಸುದೇವನ ನೋಡದ || ೨ || ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರವ ಧರಿಸಿ ತೇರನೇರಿ ಬೀದಿಲಿ ಮೆರೆವ ರಂಗವಿಠಲನ ನೋಡದ || ೩ ||
Transliteration
Kangalidyaatako kaaveri rangana nodadaa ||pa || Jagangalolage mangala mooruti | Rangana shreepaadangala nodada || a. Pa. || Endigaadaromme janaru | Bandu bhoomiyalli nintu | Chandra pushkarani snaanava maadi | Aanandadindali rangana nodada || 1 || Hari paadodaka sama kaaveri | Virajaa nadiya snaanava maadi | Parama vaikuntha ranga mandira | Para vaasudevana nodada || 2 || Haara heera vaijayanti |…