Haridasa Sahitya — Vyasadasa

Kandu endhige

ಕಂಡು ಎಂದಿಗೆ

Composer: Ambabai · Deity: Raghavendra Teertharu · Genre: Dasara Pada

Kannada lyrics

ಕಂಡು ಎಂದಿಗೆ ಧನ್ಯಳಾಗುವೆ ನಾನು ಪಂಡರೀಶನ ಪಾದ ಪುಂಡರೀಕವನೂ||pa|| . ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ ಪಾಂಡವರ ಪ್ರಿಯ ಬಂಧು ನೆಲಸಿದಂಥಾ ಪಂಡರೀ ಕ್ಷೇತ್ರದಲಿ ಚಂದ್ರಭಾಗದಿ ಮಿಂದು ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ ||1|| ಕೋಮಲದ ಚರಣಕಭಿನಮಿಸಿ ಕರಯುಗದಿಂದ ಶ್ಯಾಮವರ್ಣನ ಪಾದಕಮಲ ಮುಟ್ಟೆ ಆ ಮಹಾ ಆನಂದ ಅನುಭವಿಪ ಭಾಗ್ಯವನು ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ ||2|| ಆಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ ಆಪಾದ ಮೌಳಿ ಈಕ್ಷಿಸುತ ಹೃದಯದಲಿ ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ ಗೋಪಾಲಕೃಷ್ಣವಿಠಲನ ಎಂದು ಕಾಂಬೆ ||3||

Transliteration

Kandu endige dhanyalaguve nanu Pada pundarikavanu ||pa|| Pundarikanigolidu ondu ittige mele Pandavara priya bandhu nelasidantha Pandari kshetradali chandrabagadi mindu Mande baguta harige hindagava kaledu ||1|| Komalada charanakabinamisi karayugadinda Syamavarnana padakamala mutte A maha Ananda anubavipa bagyavanu Sri mahalakumipati endu kambuveno ||2|| Aparabaktarige valida vithalana murti Apada…