Haridasa Sahitya — Vyasadasa
Kandu dhanyanadhe
ಕ೦ಡು ಧನ್ಯನಾದೆ
Composer: Mohana Dasaru · Deity: Raghavendra Teertharu · Genre: Dasara Pada
Kannada lyrics
ಕ೦ಡು ಧನ್ಯನಾದೆ ಗುರುಗಳ – ಕಣ್ಣಾರೆ ನಾ ಕ೦ಡು ಧನ್ಯನಾದೆ ಈ ಗುರುಗಳ || ಪ || ತು೦ಗಾತಟದಿ ಬ೦ದು ನಿ೦ತ ಪ೦ಗು ಬಧಿರಾದ್ಯ೦ಗ ಹೀನರ ಅ೦ಗಗೈಸಿ ಸಲಹುವಾ – ನರ ಸಿ೦ಗನ೦ಘ್ರಿ ಭಜಕರಿವರ || ೧ || ಗುರುವರ ಸುಗುಣೇ೦ದ್ರರಿ೦ದ ಪರಿಪರಿಯಲಿ ಸೇವೆಗೊಳುತ ವರಮ೦ತ್ರಾಲಯಪುರದಿ ಮೆರೆವ ಪರಿಮಳಾಖ್ಯ ಗ್ರ೦ಥಕರ್ತರ || ೨ || ಸೋಹ೦ ಎನ್ನದೆ ಹರಿಯ ದಾ ಸೋಹ೦ ಎನ್ನಲು ಒಲಿದು ವಿಜಯ ಮೋಹನ ವಿಠ್ಠಲನ್ನ ಪರಮ ಸ್ನೇಹದಿ೦ದ ತೋರುವವರ || ೩ ||
Transliteration
Kandu dhanyanade gurugala kannare na Kandu dhanyanade namma I gurugala || Tungatatadi bandu ninta Pangu badhiradyangahinara Angagaisi salahuva narasinganangri Bajakarivara || 1 || Guruvara sugunemdrarimda Paripariyali sevegoluta Varamantralayapuradi mereva Parimalakya granthakartara || 2 || Soham ennade hariya dasoham ennalu olidu Vijaya mohanavithalana parama snehadinda toruvavara || 3 ||