Haridasa Sahitya — Vyasadasa

Kandhaneke malagane

ಕಂದನೇಕೆ ಮಲಗನೆ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಕಂದನೇಕೆ ಮಲಗನೆ , ಕೇಳೆಲೆ ಸಖಿ ||ಪ|| ಕಾಯಜಜನಕಗೇನಾಯಿತು ಇವಗೆ ಯಾವಳ ದೃಷ್ಟಿ ತಾಗಿತೆ ||ಅ|| ಕಂದನೇಕೆ ಕಣ್ಣ ಮುಚ್ಚನೆ ಇಂದು ನೀರದಡದಲ್ಲಿರುವನೆ , ಏ- ನೆಂದರು ಮುಖವೆತ್ತಿ ನೋಡನೆ , ಗೋ- ವಿಂದ ಬಾ ಎಂದರೆ ಬಾಯ ತೆರೆವನೆ || ತನಯನಾಗಿ ಧರೆ ಅಳೆದನೆ , ತನ್ನ ಜನನಿಯ ಕಂಡರೆ ಸೇರನೆ ಮುನಿಗಳಂತೆ ಮೌನ ಪಿಡಿದನೆ ಘನ ಗೋವು ಕಾಯ್ವಾಗ ಗಾಳಿ ಸೋಕಿತೇನೆ || ಸುಮ್ಮನೇತಕೆ ವ್ರತ ಕೆಡಿಸಿದನೆ ಹಮ್ಮಿನಿಂದಲಿ ಖಡ್ಗ ಪಿಡಿದನೆ ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೊ ಬೊಮ್ಮ ಶ್ರೀ ಪುರಂದರವಿಠಲ ||

Transliteration

Kandaneke malagane , kelele saki ||pa|| Kayajajanakagenayitu ivage Yavala drushti tagite ||a|| Kandaneke kanna muccane Indu niradadadalliruvane , E- Nendaru mukavetti nodane , go- Vinda ba endare baya terevane ||1|| Tanayanagi dhare aledane , tanna Jananiya kandare serane Munigalante mauna pididane Gana govu kayvaga gali sokitene ||2|| Summanetake vrata kedisidane Hamminindali kadga pididane Janma…