Haridasa Sahitya — Vyasadasa

Kande na udupiya krishnana

ಕಂಡೆ ನಾ ಉಡುಪಿಯ ಕೃಷ್ಣರಾಯನ್ನ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಕಂಡೆ ನಾ ಉಡುಪಿಯ ಕೃಷ್ಣರಾಯನ್ನ , ಭೂ-ಮಂಡಲದೊಳಗೆ ಉ- ದ್ದಂಡ ಮೋಹಿಪನ ||ಪ|| ಸಮುದ್ರವ ನಾ ಕಂಡು ಸ್ನಾನಾದಿಗಳ ಮಾಡಿ ಚಂದ್ರಮೌಳೀಶ್ವರನ ಚರಣಕೆರಗಿ ಆಮೇಲೆ ನಾಬಂದು ಅನಂತೇಶ್ವರನ್ನ ಕಂಡು ಹನುಮಂತನ ಪಾಡಿ ಮನದಿ ನಿಲಿಸಿ || ಸುತ್ತು ನದಿಯ ಕಂಡೆ ಸೂರ್ಯನ ಪ್ರಭೆ ಕಂಡೆ ಅಲ್ಲಿದ್ದ ಮಧ್ವಸರೋವರವ ಕಂಡೆ ಮಧ್ವಮತದ ಅಷ್ಟಮುನಿಗಳ ಕಂಡೆ ಪ್ರಸಿದ್ಧವಾಗಿರುವ ಶ್ರೀ ಉಡುಪಿಯ ಕೃಷ್ಣನ ಕಂಡೆ || ಉಂಗುರ ಉಡಿದಾರ ಉಡಿ ಘಂಟೆ ನಾ ಕಂಡೆ , ನಾನು ರಂಗು ಮಾಣಿಕ್ಯದ ನವರತ್ನ ಮಾಲೆ ಕಂಡೆ ದಿಂ ಧಿಮಿ ಧಿಮಿಕೆಂದು ಕುಣಿವ ಕೃಷ್ಣನ ಕಂಡೆ , ನಾನು ಪುರಂದರವಿಠಲನ್ನ ಪದಕಮಲವ ಕಂಡೆ ||

Transliteration

Kande na udupiya krishnana Bhumandaladosage uddanda mohipana | Suttu nadiyu kande, surya prabheyu kande allidda madhwa sarovarava kande madhvamatada astamunigala kande prasiddavagiruva sri udupiya Krishnana kande||1|| samudrava na kandu snanadigala madi candramaulisvarana caranakeragi a mele na bandu anantesvarana kandu hanumantana padi manadi nillisi||2|| ungura ududara udigejje(gala) na kande ra…