Haridasa Sahitya — Vyasadasa
Kande na uddanda narasimhana
ಕಂಡೆ ನಾ ತಂಡ ತಂಡದ
Composer: Haridasa · Deity: Vishnu · Genre: Dasara Pada
Kannada lyrics
ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ – ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ||pa|| ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ ಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ||1|| ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು ನರನರವನು ತೆಗೆದು ನಿರ್ಗಳಿತ ಶೋಣಿತ ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ||2|| ಪುರಜನರು ಹಾಯೆನಲು ಸುರರು ಹೂಮಳೆ ಗರೆಯೆತರತರದ ವಾದ್ಯ ಸಂಭ್ರಮಗಳಿಂದ ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ ಕರುಣಾಳು ಕಾಗಿನೆಲೆಯಾದಿಕೇಶವನ||3||
Transliteration
Kande na uddanda narasimhana Kande na tanda tandada hindu hindu daiva pracanda Ripuganda uddanda narasimhana kandenayya || pa || Gudugudisi kambadali dhadadhada sidilu sidiye | Kidikidisi senudiya dagalodane mudi pididu | Gada gadane nadu naduge gudugudisi sabe bedare | Hidi hididu hiranyakana todeyolide kedahidane Uradolappalisi aribasira sarasa sili | Paripariyali carmaveledeleyalu | Nara narata…