Haridasa Sahitya — Vyasadasa

Kande karunanidhiya gangeya

ಕಂಡೆ ಕರುಣಾನಿಧಿಯ ಗಂಗೆಯ

Composer: Purandara Dasaru · Deity: Shiva / Rudra Devaru · Genre: Bhakti

Kannada lyrics

ಕಂಡೆ ಕರುಣಾನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ ಶಿವನ ||ಪ|| ರುಂಡಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ಬಗೆಯ ಹರನ ||ಅ.ಪ|| ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ ಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ ಹರನ ||೧|| ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ ಪಶುಪತಿಯೆನಿಸುವನ ವಸುಧೆಯೊಳು ಶಶಿಶೇಖರ ಶಿವನ ಹರನ ||೨|| ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ ತ್ರಿಜಗನ್ಮೋಹನನ ತ್ರಿಲೋಚನ ತ್ರಿಪುರಾಂತಕ ಶಿವನ ಹರನ ||೩|| ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ ರಾಮನಾಮಸ್ಮರನ ರತಿಪತಿ ಕಾಮನ ಸಂಹರನ ಶಿವನ ||೪|| ಧರೆಗೆ ದಕ್ಷಿಣಕಾಶಿ ಎನಿಸುವ ಪುರ ಪಂಪಾವಾಸಿ ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ ||೫||

Transliteration

kande karunanidhiya gangeya mandeyolitta dhoreya | rundamaleya siriya nosalolu kenda gannina bageya harana gaja carmanbarana gauri vara jagadisvarana | trijaganmohanana dakshadhvarayajana kedisidana sivana harana | 1 | basita bushita harana baktara vasadolagirutihana | pasupatiyenisuvana vasudheli sasisekara sivana harana | 2 | kappu korala harana kanrapa pitana sakana | muppura gelidavana muninut…