Haridasa Sahitya — Vyasadasa

Kallusakkare kolliro nivellaru

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು

Composer: Purandara Dasaru · Deity: Hari · Genre: Philosophy

Kannada lyrics

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು ಕಲ್ಲುಸಕ್ಕರೆ ಕೊಳ್ಳಿರೋ||pa|| ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ||a.pa|| ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ ಒತ್ತೊತ್ತಿ ಗೋಣಿಯೊಳು ತುಂಬುವದಲ್ಲ ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ ಉತ್ತಮ ಸರಕಿದು ಅತಿ ಲಾಭ ಬರುವಂಥ||1|| ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ ಎಷ್ಟು ಒಯ್ಡರು ಬೆಲೆ ರೊಕ್ಕವಿದಕಿಲ್ಲ ಕಟ್ಟಿರುವೆಯು ತಿಂದು ಕಡಮೆಯಾಗುವುದಲ್ಲ ಪಟ್ಟಣದೊಳಗೆ ಪ್ರಸಿದ್ದವಾಗಿರುವಂಥ||2|| ಸಂತೆ ಸಂತೆಗೆ ಹೋಗಿ ಶ್ರಮಪಡುವುದಲ್ಲ ಸಂತೆಯೊಳಗೆ ಇಟ್ಟು ಮಾರುವುದಲ್ಲ ಸಂತತ ಭಕ್ತರ ನಾಲಗೆ ಸವಿಗೊಂಬ ಕಾಂತ ಪುರಂದರವಿಠಲ ನಾಮವೆಂಬ||3|| Kall…

Transliteration

Kallusakkare savi ballavare ballaru Pullalocana srikrushnanamavemba||a.pa|| Ettu herugalinda hottu maruvudalla Ottotti goniyolu tumbuvadalla Etta hodaru badige sunkavidakilla Uttama sarakidu ati laba baruvantha||1|| Nashta biluvudalla nata huttuvudalla Eshtu oydaru bele rokkavidakilla Kattiruveyu tindu kadameyaguvudalla Pattanadolage prasiddavagiruvantha||2|| Sante santege hogi sramapaduvudalla Sa…