Haridasa Sahitya — Vyasadasa

Kallu nayeno kaivalyadayakane

ಕಲ್ಲು ನಾಯೇನೋ ಕೈವಲ್ಯದಾಯಕನೆ

Composer: Harapanahalli Bheemavvanavaru · Deity: Hari · Genre: Bhakti

Kannada lyrics

ಕಲ್ಲು ನಾಯೇನೋ ಕೈವಲ್ಯದಾಯಕನೆ ಕಲ್ಲು ಕರುಣದಿಂದ್ಹೆಣ್ಣಾಗಿರಲುದ್ಧಾರ ಕೇಳೊ ।।ಪ॥ ಉಡಬಲ್ಲೆ ಉಣಬಲ್ಲೆ ಉತ್ತಮ ಸಂಗ ಬಿಡಬಲ್ಲೆ ನಡೆಯಬಲ್ಲೆನೊ ದುರ್ಮಾರ್ಗದಿಂದ ಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆ ಕಡಲಶಯನನ್ನ ನಾಮ ನುಡಿಯಲೊಂದರಿಯೆನೊ ।।೧।। ಕಾಮಕ್ರೋಧವ ಬಲ್ಲೆ ಮತ್ಸರ ಮದ ಲೋಭ ಮೋಹ ಬಲ್ಲೆನೊ ಬಾಂಧವ ಭವದಿ ಭೇದಬುದ್ಧಿಯ ಬಲ್ಲೆ ಆದಿಮೂರುತಿ ನಿನ್ನ ಪದದಿ ಭಕುತಿ ಪರಮಾದರೊಂದರಿಯೆನೊ ।।೨।। ನಿಷ್ಠುರಾಡುತ ಜನರ ನಿಂದಿಸುವುದು ಬಲ್ಲೆ ಕಷ್ಟಾದಾರಿದ್ರ್ಯ ಒಲ್ಲೆನ್ನ ಬಲ್ಲೆ ದುಷ್ಟ ಅಲ್ಪರಿಗೆ ಬಾಯ್ ತೆರೆಯಬಲ್ಲೆ ಭೀಮೇಶ ಕೃಷ್ಣ ನಿನದಯ ಬೇದಡಿಕೊಂಬೋದೊಂದರಿಯೆನೊ ।।೩।।

Transliteration

Kallu nayeno kaivalyadayakane Kallu karunadimd~hennagiraluddhara kelo ||pa|| Udaballe unaballe uttama sanga bidaballe Nadeyaballeno durmargadinda Kadukopadinda kathina matanadalu balle Kadalasayananna nama nudiyalondariyeno ||1|| Kamakrodhava balle matsara mada loba Moha balleno bandhava Bavadi Bedabuddhiya balle adimuruti ninna Padadi Bakuti paramadarondariyeno ||2|| Nishthuraduta janara nindisuv…