Haridasa Sahitya — Vyasadasa

Kaliyugadhali hari namava

ಕಲಿಯುಗದೊಳು ಹರಿನಾಮವ ನೆನೆದರೆ

Composer: Purandara Dasaru · Deity: Hari · Genre: Bhakti

Kannada lyrics

ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವು ||ಪ|| ಸುಲಭದ ಮುಕುತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆಮನವೆ ||ಅ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆಮನವೆ || ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಛನು ನಾನೆಂದೆನಬೇಡ ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛೆಯಿಂದ ನೀ ನೆನೆಮನವೆ || ಜಪವೊಂದರಿಯೆನು ತಪವೊಂದರಿಯೆನು ಉಪದೇಶವಿಲ್ಲೆಂದೆನಬೇಡ ಅಪಾರಮಹಿಮ ಶ್ರೀಪುರಂದರವಿಠಲನ ಉಪಾಯದಿಂದಲಿ ನೆನೆಮನವೆ ||

Transliteration

Kaliyugadalli harinamava nenedare kula kotigaluddharisuvadu ranga Sulabhada muktige sulabhanendenisuva jalaruha nabhana nene manave Snanvariyenu maunavariyenu dhyanavariyenenthanena beda Janaki vallabha dasharatha nandana ganalolana nene manave||1|| Mantravanriyenu yantravariyenu tantravariyenantaleya beda Santata nityanandana namava cintegalillade nene manave||2|| Japavondariyenu tapavondariyenu…