Haridasa Sahitya — Vyasadasa

Kalingana metti

ಕಾಳಿಂಗನಾ ಮೆಟ್ಟೆ

Composer: Vyasarajaru · Deity: Krishna / Govinda / Mukunda · Genre: Bhakti

Kannada lyrics

ಕಾಳಿಂಗನಾ ಮೆಟ್ಟೆ ನಾಟ್ಯವಾಡಿದ ಕಂಜನಾಭ ಕೃಷ್ಣನು ||pa|| ಕಾಳಿಂಗನಾ ಮೆಟ್ಟಿ ಆಡಿದ ಭರದಲ್ಲಿಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ ತರಳತನದಲ್ಲಿ ಯಮುನೆಯ ಮಡುವಿನಲ್ಲಿಆಡುತ್ತ ಪಾಡುತ್ತ ||a.pa|| ಕಾಲಲಿ ಗೆಜ್ಜೆ ಘಲುಘಲು ಘಲುಕೆನ್ನೆಫಾಲದಿ ತಿಲಕವು ಹೊಳೆ ಹೊಳೆಯುತ್ತ ಜ್ವಲಿತ ಮಣಿಮಯ ಲಲಿತ ಪದಕಹಾರಜ್ವಲಿತ ಕಾಂತಿ ಬೆಳಗುತ ದಿಕ್ಕುಗಳಲ್ಲಿ ||1|| ಸುರರು ದುಂದುಭಿಯ ಢಣಢಣ ಢಣರೆಂದುಮೊರೆಯೆ ತಾಳಗಳು ಝಣಝಣ ಝಣಾರೆಂದು ಹರಬ್ರಹ್ಮ ಸುರರು ತಥ್ಥೈತಥ್ಥೈಯೆನ್ನಲುನಾರದ ತುಂಬುರ ಸಿದ್ಧರು ವಿದ್ಯಾ-ಧರರು ಅಂಬರದಲ್ಲಿ ಆಡುತ್ತ ಪಾಡಲು||2|| ಯೋಗಿಗಳೆಲ್ಲ ಜಯ ಜಯ ಜಯಯೆನ್ನೆಭೋಗಿಗಳೆಲ್ಲ ಭಯಭಯ ಭಯವೆನ್ನೆ ನಾಗಕನ್ಯೆಯರು ಅಭಯ ಅಭಯವೆ…

Transliteration

Kalingana metti natyavadida kanjanaba krushnanu | pa | Kalingana metti adida Baradalli srivatsa uradalli koralalli vanamale Taralatanadalli yamuneya maduvinalli adutta padutta | a.pa | Kalali gejje Gulu Gulukenne Galadi tilakavu holehole holeyutta Alita manimaya lalita padakahara Alita kanti belaguta dikkugalali | 1 | Suraru dundubiya dhanadhana dhanarendu Moreya talagalu junajuna junarendu Harabr…