Haridasa Sahitya — Vyasadasa

Kalavu kalisidaryaro

ಕಳವು ಕಲಿಸಿದರ್ಯಾರೊ

Composer: Harapanahalli Bheemavvanavaru · Deity: Krishna / Govinda / Mukunda · Genre: Bhakti

Kannada lyrics

ಕಳವು ಕಲಿಸಿದರ್ಯಾರೊ ನಿನಗೆ ಕಂಜನಾಭನೆ ।।ಪ॥ ಕೇರಿ ಕೇರಿ ಮನೆಗಳಲ್ಲಿ ಕ್ಷೀರ ಗಡಿಗೆಯನೊಡಿವರೇನಲ್ಲಿ ಚೋರತನವ ನೀ ಕಲಿತಿಹುದೆಲ್ಲಿ ಜಾರನೆನಿಸಿಕೊಂಬುವುದು ಕೇಳಿ ಬಲ್ಲೆ ।।೧।। ಅಟ್ಟದ ಮ್ಯಾಲಿಟ್ಟಿದ್ದ ಬೆಣ್ಣಿ ಚಟ್ಟಿಗಿಯ ಒಡೆದಾಕಳ ಕಣ್ಣಿ ಕಟ್ಟಿ ಜುಟ್ಟ ಇವರ ಮನೆ ಹೆಣ್ಣಿ- ಗಿಟ್ಟು ಮಾಡುವರೆ ಕಣ್ಣು ಸೋನ್ನಿ ।।೨।। ಬಡವರ ಮನಿ ಅನ್ನದಲಿಷ್ಟು ತುಡುಗುತನವ ನೀ ಮಾಡುವುದೆಷ್ಟು ಪಿಡಿಯಲವರಿಗೆ ಬರುವುದತಿ ಸಿಟ್ಟು ಹಿಡಿದು ಹಾಕೋರು ನಿನಗೊಂದು ಪೆಟ್ಟು ।।೩।। ಕಡೆದ ಬೆಣ್ಣೆ ಕಾಸಿದ ತುಪ್ಪ ಕೊಡುವೆನ್ಹಾಲು ನೀ ಕುಡಿಯದಲ್ಯಾಕೊ ಮಡದಿಯರ ಸರಿ ನಿಂಗೇನು ಬೇಕೊ ಕೇಳಿ ಬ್ಯಾಸರಾದೆನು ನಿನ್ನ ವಾಕು ।।೪।। ಬಣ್ನದ್ವಲ್ಲಿ ಛಾದರ ಹೊದ್ದು…

Transliteration

Kalavu kalisidaryaro ninage kanjanabane ||pa|| Keri keri manegalalli Kshira gadigeyanodivarenalli Coratanava ni kalitihudelli Jaranenisikombuvudu keli balle ||1|| Attada myalittidda benni Chattigiya odedakala kanni Katti jutta ivara mane henni- Gittu maduvare kannu sonni ||2|| Badavara mani annadalishtu Tudugutanava ni maduvudeshtu Pidiyalavarige baruvudati sittu Hididu hakoru ninagomdu pettu ||3|…