Haridasa Sahitya — Vyasadasa

Kailaasa vaasa goureesha eesha

ಕೈಲಾಸವಾಸ ಗೌರೀಶ ಈಶಾ

Composer: Vijaya Dasaru · Deity: Shiva / Rudra Devaru · Genre: Bhakti

Kannada lyrics

ಕೈಲಾಸವಾಸ ಗೌರೀಶ ಈಶಾ || ಪ || ತೈಲಧಾರೆಯಂತೆ ಮನಸು ಕೊಡು ಹರಿಯಲಿ || ಅ.ಪ || ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೇ ಅಹಿ ಭೂಷಣನೆಯೆನ್ನ ಅವಗುಣಗಳೆಣಿಸದಲೆ ವಿಹಿತ ಧರ್ಮದಲಿ ವಿಷ್ಣು ಭಕುತಿಯ ಕೊಡು ಶಂಭೋ || ೧ || ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ ದನುಜಗಜ ಮದಹಾರಿ ದಂಡಪ್ರಣಾಮವಮಾಳ್ಪೆ ಮನಸೋ ಈ ಶಿರವ ಸಜ್ಜನರ ಸಿರಿ ಚರಣದಲಿ || ೨ || ಭಾಗೀರಥೀಧರನೇ ಭಯವ ಪರಿಹರಿಸಯ್ಯ ಲೇ ಸಾಗಿ ಒಲಿದು ಸಂತತ ಶರ್ವ ದೇವಾ ಭಾಗವತ ಜನಪ್ರೀಯ ವಿಜಯ ವಿಟ್ಠಲನಂಘ್ರಿ ಜಾಗುಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೋ || ೩ ||

Transliteration

Kailaasa vaasa goureesha eesha || pa || Taila dhaareyante manasu kodu hariyalli shambho || a.pa. || Aho raatriyali naanu anucharaagraniyaagi | Mahiyolage charisideno mahadevane | Ahibhooshanane ennavagunagalenisadale | Vihita dharmadi vishnu bhakutiyanu kodu shambho || 1 || Manasu kaaranavalla paapa punyakkella | Analaaksha ninna preraneyillade | Danuja mada gaja haari damda pranaamava maalpe | Ma…