Haridasa Sahitya — Vyasadasa

Kaayo shreenaarasimha

ಕಾಯೋ ಶ್ರೀ

Composer: Gopala Dasaru · Deity: Narasimha · Genre: Bhakti

Kannada lyrics

ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ।ಪ। ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ ಭಯಾಂಧತಿಮಿರಮಾರ್ತಾಂಡ ಶ್ರೀನಾರಸಿಂಹ ।ಅ ಪ। ಘೋರ ಅಕಾಲಮೃತ್ಯು ಮೀರಿ ಬರಲು ಕಂಡು ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ।।೧।। ಧೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು ಸುಷಮ್ನಾನಾಡಿಸ್ಥಿತವಿಭುವೆ ಶ್ರೀನಾರಸಿಂಹ ।।೨।। ಜ್ಞಾನರಹಿತನಾಗಿ ನಾ ನಿನ್ನ ಮರೆತರೆ ನೀನೂ ಮರೆತದ್ಯಾಕೆ ಪೇಳೋ ಶ್ರೀ ನಾರಸಿಂಹ ।।೩।। ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ।।೪।। ಪಾಲಮುನ್ನೀರಾಗರ ಪದುಮಮನೋಹರ ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ।।೫।।

Transliteration

Kaayo shreenaarasimha | kaayo jaya Naarasimha Kaayo || pa || Kaayo shreenaarasimha trayambakaadyamaresha | Bhayaandhatimira maartaanda jaya naarasimha kaayo || a. Pa. || Ghora akaalamrutyu meeri baralu kandu | Dheera nee bidisadinyaaro jaya naarasimha kaayo ||1 || Bheeshanane subhadra dosha mrutyuge mrutyu | Sushumnaanaadisthita vibhuve jaya naarasimha || 2 || J~jaana rahitanaagi naa ninna maretar…