Haridasa Sahitya — Vyasadasa
Kaayalereno krishna
ಕಾಯಲಾರೆನು ಕೃಷ್ಣ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು ನಾಯಿಕುನ್ನಿಗಳಂತೆ ಪರರ ಪೀಡಿಸುತ ||ಪ|| ಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು ಪದುಮನಾಭನ ಸ್ಮರಣೆ ಮೊದಲಿಲ್ಲದೆ ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು ಒದಗಿ ಸೇವೆಯ ಮಾಡಿ ಅವರ ಬಾಗಿಲನು || ಕಲ್ಲ ಕರಗಿಸಬಹುದು , ಹುರಿಗಡಲೆಯೊಳು ಅದರ ತೈಲವನು ತೆಗೆದಾದರುಣಲುಬಹುದು ಬಲ್ಲಿದವರ ಮನಸು ಮೆಚ್ಚಿಸಲರಿಯೆನೈ ಹಲ್ಲು ಕಿರಿಯುತೆ ಹಂಬಲಿಸಿ ಬಾಯಿಬಿಡುತ || ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ ಅಂತ್ಯವನು ನಾ ಕಾಣೆ ಆದರಿಸುವವರಿಲ್ಲ ಚಿಂತೆಯ ಬಿಡಿಸಯ್ಯ ಪುರಂದರವಿಠಲ ||
Transliteration
Kayalarenu krushna kandavara bagilanunayikunnigalante parara pidisuta ||pa|| Udayakaladaleddu sandhyavidhiya bittu Padumanabana smarane modalillade Mudadi ninnarchisade narara sadanava pokku Odagi seveya madi avara bagilanu ||1|| Kalla karagisabahudu , hurigadaleyolu adara Tailavanu tegedadarunalubahudu Ballidavara manasu meccisalariyenai Hallu kiriyute hambalisi bayibiduta ||2|| Intu nana chintey…