Haridasa Sahitya — Vyasadasa
Kaapadale sakalaapadharini
ಕಾಪಾಡೆಲೆ ಸಕಲಾಪಧ್ಹಾರಿಣಿ
Composer: Gopala Dasaru · Deity: Lakshmi Devi · Genre: Bhakti
Kannada lyrics
ಕಾಪಾಡೆಲೆ ಸಕಲಾಪಧ್ಹಾರಿಣಿ ಕೊಲ್ಲಾಪುರಗತ ಕಮಲೆ || ಪ.|| ಈ ಪರಿ ಹರಿಯ ದಯಾಪಾತ್ರಳೆ ಶುಭನೂಪುರಾದಿ ಸುಕಲಾಪೆ ಶೋಭಿತೆ ಭ್ರೂ-ಚಾಪ ಚಲನದಿಂದ ಪವಮಾನನಿ-ಗೆ ಪದದೇ ಭವತಾಪಗಳಳಿದು || ಅ.ಪ. || ಇಂದೀವರಮಂದಿರನಂದಿನಿ ಚಂದ್ರಜಯಿಪ ವದನೆಬೃಂದಾರಕ ಮುನಿವಂದಿತ ಪದಯುಗೆ ಕುಂದಕುಟ್ಮಲರದನೆ ಮದನೆ ಮುಕುಂದ ಹೃದಯಸದನೆ ಇಂದ್ರನೀಲನಭ ಸುಂದರತನು ಗುಣ-ಸಾಂದ್ರ ಇಂದುಮುಖಿ ಮಂದರಧರಗೋ-ವಿಂದ ಬಂಧುನುತೆ ಬೃಂದಾವನಪತಿನಂದನಂದನನಾನಂದಿನಿ ವಂದಿತೆ || 1 || ಕನ್ಯಾಮಣಿ ಜಗನ್ಮಾನ್ಯಾಮೃತ ಪಾವನ್ನಾಧರ ಬಿಂಬೆಘನ ಕಲಶ ಕುಚವನ್ನು ಧರಿಪ ಕಟಿಸಣ್ಣ ಘನನಿತಂಬೆ ಅಂಬೆ ಚಿನ್ನಪುತ್ಥಳಿ ಬೊಂಬೆಅನ್ನವಸನ ಧನಧಾನ್ಯಕಾಗಿ ಪರ-ರನ್ನ ಯಾಚಿಸಿ ಬಲು ಖಿನ್ನನಾಗುತಲಿ…
Transliteration
Kapadele sakalapadhharini kollapuragata kamale || pa.|| I pari hariya dayapatrale subanupuradi sukalape sobite Bru-capa calanadinda pavamanani-ge padade bavatapagalalidu || a.pa. || Indivaramandiranandini chandrajayipa vadanebrundaraka munivandita Padayuge kundakutmalaradane madane mukunda hrudayasadane indranilanaba Sundaratanu guna-sandra indumuki mandaradharago-vinda bandhunute Brundavana pati…