Haridasa Sahitya — Vyasadasa

Kaada beladingalu

ಕಾಳಬೆಳದಿಂಗಳು

Composer: Sripadarajaru · Deity: Hari · Genre: Vairagya

Kannada lyrics

ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ|| ಸತ್ಯಕ್ಕೆ ಧರ್ಮನು ಲೆತ್ತವನಾಡಲು ಅರ್ಧ ಭಾಂಡಾರವೆಲ್ಲವ ಸೋತು ಮತ್ತೆ ವಿರಾಟರಾಯನ ಮನೆಯಲ್ಲಿ ತೊತ್ತಾದಳು ದ್ರೌಪದಿ ಒಂದು ವರುಷ ||೧|| ಪುಂಡರೀಕಾಕ್ಷ ಪುರುಷೋತ್ತಮ ಹರಿಯು ಬಂಡಿಬೋವನಾದ ಪಾರ್ಥನಿಗೆ ಭೂ – ಮಂಡಲನಾಳುವ ಹರಿಶ್ಚಂದ್ರರಾಯನು ಕೊಂಡವ ಕಾಯಿದನು ಹೊಲೆಯನಾಳಾಗಿ ||೨|| ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಬಂಟರಾಗಿ ಬಾಗಿಲ ಕಾಯ್ವರು ಉಂಟಾದತನ ತಪ್ಪಿ ಬಡತನ ಬಂದರೆ ಒಂಟೆಯಂತೆ ಗೋಣ ಮೇಲೆತ್ತುವರು ||೩|| ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ ಬೆಂಬಲದಲಿ ನಲಿನಲಿವುತಿಹರು ಬೆಂಬಲತನ ತಪ್ಪಿ ಬಡತನ ಬಂದರೆ ಇಂಬು ನಿನಗಿಲ್ಲ ನಡೆಯೆಂಬರು ||೪|| ಏರುವ ದಂಡಿಗೆ ನೂರಾಳು ಮಂ…

Transliteration

KaaLa beladingalu | ee samsaara kattale beladingalu || pa || Satyakke dharmanu lettavanaadalu | artha bhaandaaravellava sotu | matte viraatana maneyalli | tottaadalu droupadi omdu varusha || 1 || Pundarikaaksha purushottama hariyu | bandi bovanaada paarthanige bhoo- | mandalanaaluva harishchamdra raayanu | kondava kaaydanu holeyanaalaagi || 2 || Untaada kaalakke nentaru ishtaru | bantaraagi maneya…