Haridasa Sahitya — Vyasadasa

Jo jo jo bala mukunda

ಜೋ ಜೋ ಜೋ ಬಾಲ ಮುಕುಂದ

Composer: Mahipati Dasaru · Deity: Krishna / Govinda / Mukunda · Genre: Jojo / Laali

Kannada lyrics

ಜೋಜೋಜೋ ಬಾಲ ಮುಕುಂದ | ಯೋಗಿ ಹೃದಯಾನಂದ | ಜೋಜೋ ನಮ್ಮ ಗೋಪಿಯ ಕಂದ | ಜೋಜೋ ಗೋಪಾಲ ಗೋವಿಂದ | ಜೋ ಜೋ ||ಪಲ್ಲವಿ|| ಉರಗರಾಜನ ಹಾಸಿಗೆ ಮೇಲೆ | ಸಿರಿದೇವಿ ಕೈಯಲಿ ಸೇವೆಯ ಕೊಳ್ಳುತಲಿ | ಬಾರದಿ ನಾರದ ಗಾಯನದಲ್ಲಿ | ಇಂಥ | ಮೆರೆವ ಯೋಗದ ನಿದ್ರೆಯಲಿ || ಜೋಜೋ ||೧|| ಅದನೆಲ್ಲವ ಬಿಟ್ಟು ಶ್ರೀಹರಿ | ವಿದಿತ ಬಾಲಕ ವೇಷವದೋರಿ | ಪುದುಲದಿಂದಲಿ ತೊಟ್ಟಿಲ ಸಾರಿ | ಮುದದಲ್ಲಾಡುವ ಸುರ ಸಹಕಾರಿ || ಜೋಜೋ ||೨|| ಏನು ಪುಣ್ಯವೋ ಗೋಕುಲ ಜನರ | ಶ್ರೀ ನಂದಾತ್ಮಜ ನಾದ ವಿನೋದ | ಧ್ಯಾನ ಮೌನಕೆ ಗೋಚರಪದ | ಮಹ | ದಾನಿ ಮಹಿಪತಿಸುತ ಪ್ರಿಯನಾದ | ಜೋ ಜೋ ||೩||

Transliteration

Jojojo bala mukunda |yogi hrudayananda | Jojo namma gopiya kanda | Jojo gopala govinda | jo jo ||pa|| Uragarajana hasige mele | Siridevi kaiyali seveya kollutali | Baradi narada gayanadali | intha | Mereva yogada nidreyali || jojo ||1|| Adanellava bittu srihari | Vidita balaka veshavadori | Puduladindali tottila sari | Mudadalladuva sura sahakari || jojo ||2|| Enu punyavo gokula janara | Sri nanda…