Haridasa Sahitya — Vyasadasa

Jayathu kothanda rama

ಜಯತು ಕೋದಂಡರಾಮ ಜಯತು

Composer: Purandara Dasaru · Deity: Rama · Genre: Bhakti

Kannada lyrics

ಜಯತು ಕೋದಂಡರಾಮ ಜಯತು ದಶರಥರಾಮ ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು ||ಪ|| ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ ಪ್ರೀತಿಯಿಂದಲಿ ತಂದು ಸಕಲ ಭೂತಳವ ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ ||೧|| ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ ಲಲನೆಗೋಸುಗ ಬಂದ ನೆವದಿಂದ ರಾವಣನ ತಲೆಗಳನು ಚೆಂಡಾದಿ ಮೆರೆದ ರಘುರಾಮ ||೨|| ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ ಎಸೆವ ತುರಗವನೇರಿ ಮಲ್ಲರನು ಸವರಿ ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ ಬಿಸಜಾಕ್ಷಯೋಧ್ಯಪುರವಾಸ ರಘುರಾಮ ||೩||

Transliteration

Jayatu kodandarama jayatu dasaratha ramajayatu Sitarama jayatu ragurama jayatu jayatu|pa| Tamadaityananu maduhi mandarachala negahi Pritiyindali tandu sakala butalava Kshetradindudbavisi moreyiduva balakana Bitiyanu bidisi nerekayda ragurama |1| Baliyol danava madi nelana iradi madi Chaladinda kshatriyara kulava hogadi Lalanegosuga banda nevadinda ravanana Talegalanu chendadi mereda ragurama|2| Va…