Haridasa Sahitya — Vyasadasa

Jayaraaya Jayaraaya(Jagannatha dasaru)

ಜಯರಾಯ ಜಯರಾಯ

Composer: Jagannatha Dasaru · Deity: Jayateertharu · Genre: Dasara Pada

Kannada lyrics

ಜಯರಾಯ ಜಯರಾಯ ದಯವಾಗೆಮಗನುದಿನ ಸುಪ್ರೀಯಾ ||pa|| ಸುರನಾಥನೆ ನೀ ನರನ ವೇಷದಿ ಧರಣಿಯೊಳಗೆ ಅವತರಿಸಿ ದಯದಿ ||1|| ವಿದ್ವನ್ಮಂಡಲಿ ಸದ್ವಿನುತನೆ ಪಾ ದದ್ವಯಕೆರಗುವೆ ಉದ್ಧರಿಸೆನ್ನನು ||2|| ವಿದ್ಯಾರಣ್ಯನಾ ವಿದ್ಯಮತದ ಕು ಸಿದ್ಧಾಂತಗಳ ಅಪದ್ಧವೆನಿಸಿದೆ ||3|| ಅವಿದಿತನ ಸತ್ಕವಿಗಳ ಮಧ್ಯದಿ ಸುವಿವೇಕಿಯ ಮಾಡವನಿಯೊಳೆನ್ನನು ||4|| ಗರುಪೂರ್ಣಪ್ರಜ್ಞರ ಸನ್ಮತವನು ಉದ್ಧರಿಸಿ ಮೆರೆದೆ ಭುಸುರವರ ವರದಾ ||5|| ಸಭ್ಯರ ಮಧ್ಯದೊಳಭ್ಯಧಿಕ ವರಾ ಕ್ಷೋಭ್ಯ ಮುನಿಕರಾಬ್ಜಾಭ್ಯುದಿತ ಗುರು ||6|| ನಿನ್ನವರವ ನಾನನ್ಯಗನಲ್ಲ ಜ ಗನ್ನಾಥವಿಠಲನೆನ್ನೊಳಗಿರಿಸೋ ||7||

Transliteration

jayarAya jayarAya dayavAgemaganudina suprIyA ||pa|| suranAthane nI narana vEShadi dharaNiyoLage avatarisi dayadi ||1|| vidvanmanDali sadvinutane pA dadvayakeraguve uddharisennanu ||2|| vidyAraNyanA vidyamatada ku siddhAntagaLa apaddhaveniside ||3|| aviditana satkavigaLa madhyadi suvivEkiya mADavaniyoLennanu ||4|| garupUrNapraj~jara sanmatavanu uddharisi merede Busuravara varadA ||5|| saByara madhy…