Haridasa Sahitya — Vyasadasa

Jayaraaya jayaraaya(Guru Jagannatha dasaru)

ಜಯರಾಯ ಜಯರಾಯ

Composer: Jagannatha Dasaru · Deity: Vishnu · Genre: Dasara Pada

Kannada lyrics

ಜಯರಾಯ ಜಯರಾಯ ||pa|| ದಯಕರ ಸಜ್ಜನಭಯಹರ ಗುರುವರ ||a.pa|| ವಾಸವ ನೀ ವಸುಧೀಶನ ನಿಜ ಕೂಸೆನಿಸೀಪರಿ ದೇಶದಿ ಮೆರೆದೆ ||1|| ಸತಿಯಳ ತ್ಯಜಿಸಿ ಯತಿರೂಪ ಧರಿಸಿ ಪÀತಿತರ ಶಾಸ್ತ್ರವ ಹತಮಾಡಿದಿ ನೀ ||2|| ಸುಧಾದಿಗ್ರಂಥವ ಮುದದಲಿ ರಚಿಸಿ ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ||3|| ಅಲವಬೋಧರ ಮತ ಬಲವತ್ತರಮಾಡಿ ಜಲಜನಾಭನ ಮನ ಒಲಿಸಿದ್ಯೊ ಜೀಯಾ ||4|| ಪ್ರಮಿತಜನಗಣನಮಿತ ಪದಾಂಬುಜ ಅಮಿತಮಹಿಮ ನಿನ್ನ ನಮಿಸುವೆ ದಿನದಿನ ||5|| ಯಾತಕೆ ಎನ್ನನು ಈ ತೆರನೋಡುವಿ ದಾತಗುರುಜಗನ್ನಾಥ ವಿಠಲ ಪ್ರೀಯ||6||

Transliteration

jayarAya jayarAya ||pa|| dayakara sajjanaBayahara guruvara ||a.pa|| vAsava nI vasudhISana nija kUsenisIpari dESadi merede ||1|| satiyaLa tyajisi yatirUpa dharisi paÀtitara SAstrava hatamADidi nI ||2|| sudhAdigranthava mudadali racisi budhajanastomake odagisi koTTi||3|| alavabOdhara mata balavattaramADi jalajanABana mana olisidyo jIyA ||4|| pramitajanagaNanamita padAMbuja amitamahima ninna namisuve…