Haridasa Sahitya — Vyasadasa

Jayamangalam nitya subamangalam

ಜಯಮಂಗಳಂ ನಿತ್ಯ ಶುಭಮಂಗಳಂ

Composer: Purandara Dasaru · Deity: Hari · Genre: Aarathi

Kannada lyrics

ಜಯಮಂಗಳಂ ನಿತ್ಯ ಶುಭಮಂಗಳಂ||pa|| ಇಂದೀವರಾಕ್ಷಗೆ ಇಭರಾಜವರದಗೆ ಇಂದಿರಾರಮಣ ಗೋವಿಂದ ಹರಿಗೆ ನಂದನ ಕಂದಗೆ ನವನೀತ ಚೋರಗೆ ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ||1|| ಕ್ಷೀರಾಬ್ಧಿವಾಸಗೆ ಕ್ಷಿತಿಜನ ಪಾಲಗೆ ಮಾರನನು ಪಡೆದ ಮಂಗಲಮೂರ್ತಿಗೆ ಚಾರುಚರಣದಿಂದ ಚೆಲುವ ಗಂಗೆಯ ಪಡೆದ ಕಾರುಣ್ಯಮೂರ್ತಿ ಕೌಸ್ತುಭಧಾರಿಗೆ||2|| ವ್ಯಾಸಾವತಾರಗೆ ವೇದ ಉದ್ಧಾರಗೆ ವಾಸಿತಾನಂತಪದ ಸಕಲೇಶಗೆ ವಾಸುದೇವನ ಮೂರ್ತಿ ಪುರಂದರವಿಟ್ಠಲಗೆ ದಾಸರನು ಕಾಯ್ವ ರುಕ್ಮಿಣಿರಮಣಗೆ||3|| Jayamangalam nitya subamangalam||pa||

Transliteration

Indivarakshage ibarajavaradage Indiraramana govinda harige Nandana kandage navanita corage Vrumdarakendra udupiya krushnage||1|| Kshirabdhivasage kshitijana palage Marananu padeda mangalamurtige Carucaranadinda celuva gangeya padeda Karunyamurti kaustubadharige||2|| Vyasavatarage veda uddharage Vasitanantapada sakalesage Vasudevana murti purandaravitthalage Dasaranu kayva rukminiramanage||3||